ನವದೆಹಲಿ: ಆಂಧ್ರಪ್ರದೇಶದ ಮಹಿಳೆಯರಿಗೆ ವಿಶೇಷ ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ ತೆಲುಗು ದೇಶಂ ಪಕ್ಷದ(ಟಿಡಿಪಿ) ಸಂಸದ ಎನ್ ಶಿವಪ್ರಸಾದ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಮಹಿಳೆಯರಂತೆ ಸೀರೆ ಉಟ್ಟು ಸಂಸದರು ಕೇಂದ್ರ ಸಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಶಿವಪ್ರಸಾದ್ ಅವರಿಗೆ ಸಾಥ್ ನೀಡಿದ್ದಾರೆ.
2018ರ ಕೇಂದ್ರ ಬಜೆಟ್ ನಲ್ಲಿ ಆಂಧ್ರಪ್ರದೇಶದ ಜನತೆಗೆ ಸಾಕಷ್ಟು ಫಂಡ್ ನೀಡಲಿಲ್ಲ ಎಂದು ಟಿಡಿಪಿ ಕಳೆದ ತಿಂಗಳಿನಿಂದಲೂ ಕೇಂದ್ರ ಸರ್ಕರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಲೇ ಬಂದಿದೆ. ಇದರ ಹಿತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲಿನ ಸರ್ಕಾರ 2018-19ರಲ್ಲಿ ಸುಮಾರು 416 ಕೋಟಿ ರೂ.ಗಳಷ್ಟು ಆದಾಯದ ಕೊರತೆ ಎದುರಿಸುತ್ತಿದೆ ಅಂತ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸಬಹುದು ಅಂತ ಅಂದುಕೊಂಡಿದ್ವಿ. ಆದ್ರೆ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. ಕಳೆದ 4 ವರ್ಷದಿಂದ ಕಾಯುತ್ತಿದ್ದೇವೆ. ಯಾವುದೇ ಪ್ರಯೋಜನವಿಲ್ಲ. 2018ರ ಬಜೆಟ್ ನಲ್ಲಾದರೂ ರಾಜ್ಯಕ್ಕೆ ಸರ್ಕಾರ ಕೊಡುಗೆ ನೀಡಬಹುದು ಅಂತ ಆಶಯ ವ್ಯಕ್ತಪಡಿಸಿದ್ವಿ. ಆದ್ರೆ ಈ ಬಾರಿಯ ಬಜೆಟ್ ನಲ್ಲೂ ರಾಜ್ಯಕ್ಕೆ ಕೊಡುಗೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಈ ಹಿಂದೆ ಅಂದ್ರೆ 2016ರಲ್ಲಿ ನೋಟು ನಿಷೇಧವಾದ ಸಂದರ್ಭದಲ್ಲಿ ರಾಜ್ಯದ ಜನತೆ ಕಷ್ಟ ಅನುಭವಿಸಿದ್ದು, ಈ ವೇಳೆ ಸಂಸದ ಶಿಪ್ರಸಾದ್ ಅವರು ಕಪ್ಪು-ಬಿಳುಪಿನ ಉಡುಗೆ ತೊಟ್ಟು ಸಂಸತ್ತಿಗೆ ಆಗಮಿಸಿ ಪ್ರತಿಭಟಿಸಿದ್ದರು.