ಹೈದರಾಬಾದ್: ತೆಲಗು ದೇಶಂ ಪಕ್ಷದ (ಟಿಡಿಪಿ) ಶಾಸಕ ಕಿದರಿ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಶಿವಾರಿ ಸೋಮಾ ಅವರನ್ನು ಇಂದು ನಕ್ಸಲರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕು ಕಣಿವೆಯ ಪ್ರದೇಶದ ದುಂಬ್ರಿಗುಡ ಮಂಡಲದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಪಕ್ಷದ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ನಕ್ಸಲರು ದಾಳಿ ಮಾಡಿದ್ದಾರೆ.
Advertisement
ಸರ್ವೇಶ್ವರ ಹಾಗೂ ಶಿವಾರಿ ಸೋಮಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದ ನಕ್ಸಲರು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಶಾಸಕರು ಮೃತಪಟ್ಟಿದ್ದಾರೆ.
Advertisement
Advertisement
2014ರ ವಿಧಾನಸಭಾ ಚುನಾವಣೆಯಲ್ಲಿ ವಾಯ್‍ಎಸ್‍ಆರ್‍ಸಿಪಿ ಯಿಂದ ಸ್ಪರ್ಧಿಸಿದ್ದ ಸರ್ವೇಶ್ವರ್, ಟಿಡಿಪಿಯಿಂದ ಅಭ್ಯರ್ಥಿಯಾಗಿದ್ದ ಸೋಮಾ ಅವರನ್ನು ಸೋಲಿಸಿದ್ದರು. ಚುನಾವಣೆ ಬಳಿಕ 2016ರಲ್ಲಿ ಸರ್ವೇಶ್ವರ್ ಟಿಡಿಪಿಗೆ ಸೇರಿಕೊಂಡರು. ಈ ಇಬ್ಬರು ನಾಯಕರಿಗೂ ನಕ್ಸಲರಿಂದ ಕೊಲೆ ಬೆದರಿಕೆ ಕರೆಗಳು ಬೆದರಿಕೆಗಳು ಬರುತ್ತಿದ್ದವು ಎಂದು ವರದಿಯಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
TDP leaders Kidari Sarveswara Rao (pic 1) & Siveri Soma (pic 2), present and former MLA from Araku respectively, who were shot dead by Naxals in Visakhapatnam today. #AndhraPradesh pic.twitter.com/PmlfDzlPFl
— ANI (@ANI) September 23, 2018