ನವದೆಹಲಿ: ಮುಂಬರುವ ಲೋಕಸಭೆ (Lok Sabha Elections 2024) ಮತ್ತು ವಿಧಾನಸಭೆಗೆ ಟಿಡಿಪಿ (TDP), ಜೆಎಸ್‌ಪಿ (JSP) ಮತ್ತು ಬಿಜೆಪಿ (BJP) ಮೈತ್ರಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದೊಂದಿಗೆ ತೆಲುಗು ದೇಶಂ ಪಕ್ಷ (ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪಕ್ಷ) ಮತ್ತು ಜನಸೇನಾ ಪಕ್ಷಗಳು (ನಟ ಪವನ್ ಕಲ್ಯಾಣ್ ಪಕ್ಷ) ಮೈತ್ರಿ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ನಡ್ಡಾ (J.P.Nadda) ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ – ಇಂಡಿಯಾ ಒಕ್ಕೂಟ ಸೇರುವ ವದಂತಿಗೆ ಮಾಯಾವತಿ ಸ್ಪಷ್ಟನೆ
Advertisement
I wholeheartedly welcome the decision of Shri @ncbn and Shri @PawanKalyan to join the NDA family. Under the dynamic and visionary leadership of Hon. PM Shri @narendramodi ji, BJP, TDP, and JSP are committed to the progress of the country and the upliftment of the state and…
— Jagat Prakash Nadda (Modi Ka Parivar) (@JPNadda) March 9, 2024
Advertisement
ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ ಬಿಜೆಪಿ, ಟಿಡಿಪಿ ಮತ್ತು ಜೆಎಸ್‌ಪಿ ಆಂಧ್ರಪ್ರದೇಶದಲ್ಲಿ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲು ನಿರ್ಧರಿಸಿದೆ ಎಂದು ಜೆಎಸ್‌ಪಿ-ಟಿಡಿಪಿ-ಬಿಜೆಪಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ.
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಿಂದ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಟಿಡಿಪಿ ಮತ್ತು ಬಿಜೆಪಿ ಬಹಳ ಹಳೆಯ ಸಂಬಂಧವನ್ನು ಹೊಂದಿದೆ. ಟಿಡಿಪಿ ಮತ್ತು ಜೆಎಸ್‌ಪಿ ಜೊತೆಗೂಡುವುದು ಆಂಧ್ರಪ್ರದೇಶದ ಜನರ ಆಕಾಂಕ್ಷೆಗಳನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮಾರ್ಚ್ 13ರ ಒಳಗಡೆ 100 ಹೆದ್ದಾರಿ ಯೋಜನೆ, 10 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ ಮೋದಿ
Advertisement
ಬಿಜೆಪಿ ಮತ್ತು ಟಿಡಿಪಿ ಒಟ್ಟಿಗೆ ಬಹಳ ಹಳೆಯ ಸಂಬಂಧವನ್ನು ಹೊಂದಿವೆ. ಟಿಡಿಪಿ 1996 ರಲ್ಲಿ ಎನ್‌ಡಿಎ ಸೇರಿತು. ವಾಜಪೇಯಿ ಮತ್ತು ನರೇಂದ್ರ ಮೋದಿ ಸರ್ಕಾರಗಳಲ್ಲಿ ಯಶಸ್ವಿಯಾಗಿ ಒಟ್ಟಿಗೆ ಕೆಲಸ ಮಾಡಿದೆ. 2014 ರಲ್ಲಿ ಟಿಡಿಪಿ ಮತ್ತು ಬಿಜೆಪಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡಿದವು. ಆಂಧ್ರಪ್ರದೇಶದಲ್ಲಿ 2014 ರ ಸಾರ್ವತ್ರಿಕ ಮತ್ತು ವಿಧಾನಸಭಾ ಚುನಾವಣೆಗಳನ್ನು ಜೆಎಸ್‌ಪಿ ಬೆಂಬಲಿಸಿತ್ತು ಎಂದು ತಿಳಿಸಿದೆ.
ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಸೀಟು ಹಂಚಿಕೆಯ ವಿಧಾನಗಳನ್ನು ಒಂದೆರಡು ದಿನಗಳಲ್ಲಿ ಚರ್ಚಿಸಲಾಗುವುದು. ಮೈತ್ರಿಯು ಆಂಧ್ರಪ್ರದೇಶದ ಜನರ ಸಂಪೂರ್ಣ ಬೆಂಬಲದೊಂದಿಗೆ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದೆ ಎಂದು ಆಶಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‍ಗೆ ಶಾಕ್ – ಮಾಜಿ ಕೇಂದ್ರ ಸಚಿವ ಸೇರಿ ಹಲವು ನಾಯಕರು ಬಿಜೆಪಿಗೆ