ನವದೆಹಲಿ: ಕರ್ನಾಟಕದ ಕುಂಚಿಟಿಗ ಸಮುದಾಯಕ್ಕೆ (Kunchitiga community) ಒಬಿಸಿ (OBC) ಮೀಸಲಾತಿ ಕಲ್ಪಿಸುವಂತೆ ಮಾಜಿ ಸಚಿವ ಟಿ.ಬಿ ಜಯಚಂದ್ರ (TB Jayachandra) ಮನವಿ ಮಾಡಿದ್ದಾರೆ. ಕೇಂದ್ರ ಹಿಂದುಳಿದ ವರ್ಗಗಳ ಉಪ ಪಂಗಡಗಳ ‘ರೋಹಿಣಿ’ ನಿಯೋಗದ ಅಧ್ಯಕ್ಷೆ, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ ಜಿ. ರೋಹಿಣಿ ಅವರನ್ನು ಭೇಟಿ ಮಾಡಿದ ಅವರು ಈ ಬಗ್ಗೆ ಚರ್ಚೆ ನಡೆಸಿದರು.
ಭೇಟಿ ವೇಳೆ ಮನವಿಗೆ ಪೂರಕವಾಗಿ ಹಿಂದಿನಿಂದಲೂ ಕೇಂದ್ರ ಸರ್ಕಾರದ ಜೊತೆ ನಡೆದಿರುವ ಪತ್ರ ವ್ಯವಹಾರಗಳ ದಾಖಲೆ, ಕುಂಚಿಟಿಗ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಲು ಅಗತ್ಯವಿರುವ ಹಲವಾರು ದಾಖಲೆಗಳನ್ನು ನೀಡಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಇದನ್ನೂ ಓದಿ: ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್ ನಿರ್ಮಾಣ: ಮುರುಗೇಶ್ ನಿರಾಣಿ
Advertisement
Advertisement
ಮನವಿ ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ತುಮಕೂರು, ಹಿರಿಯೂರು, ಶಿಕಾರಿಪುರ, ಚಿಕ್ಕಹುಲಿಕುಂಟೆಯಲ್ಲಿ ಕುಂಚಿಟಿಗರ ಸಮಾವೇಶ ನಡೆದಿತ್ತು. ಈ ಸಮುದಾಯದ ಬಹುದಿನಗಳ ಬೇಡಿಕೆಯಾದ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸಲು ಅಗತ್ಯವಿರುವ ಹೋರಾಟ ಮಾಡಲು ಒಮ್ಮತದಿಂದ ತಿರ್ಮಾನ ಮಾಡಿ ಈ ಕುರಿತು ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಕೋಟಿ ಕಂಠ ಗಾಯನದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪ್ರಹ್ಲಾದ್ ಜೋಶಿ
Advertisement
ಸುಮಾರು 2 ದಶಕಗಳ ಕಾಲ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಲು ಹೋರಾಟ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇದ್ದಂತಹ ಅನೇಕ ಕಾನೂನು ತೊಡಕುಗಳನ್ನು ನಿವಾರಣೆ ಮಾಡಿ, ತಾವು ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದ ಮೂಲಕ ಸಮುದಾಯದ ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದೇವೆ. ಈಗಾಗಲೇ 2019ರಲ್ಲಿ ಈ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆ ಅಂಗೀಕರಿಸಿ ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರದ ಮುಖೇನ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಆಧರಿಸಿ ಕ್ರಮ ವಹಿಸಲು ಮನವಿ ಮಾಡಿದೆ ಎಂದರು.