ತುಮಕೂರು: ವಕೀಲರ ಮತ ಕೇಳಲು ಹೋದ ಕಾನೂನು ಸಚಿವ ಟಿಬಿ ಜಯಚಂದ್ರ ಅವರಿಗೆ ಶಿರಾ ವಕೀಲರ ಸಂಘ ತರಾಟೆಗೆ ತೆಗೆದುಕೊಂಡಿದೆ.
ಗುಬ್ಬಿಯಲ್ಲಿ ಮೂರು ಜನ ಇದ್ದರೆ, 15 ವರ್ಷ ದಿಂದ ಶಿರಾ ಕೋರ್ಟ್‍ನಲ್ಲಿ ಸಾರ್ವಜನಿಕ ಅಭಿಯೋಜಕರಿಲ್ಲ. ಅಷ್ಟೇ ಅಲ್ಲದೇ ಎ.ಸಿ.ಕೋರ್ಟ್ ಅನ್ನು ತಿಂಗಳಲ್ಲಿ ಒಂದು ದಿನ ಶಿರಾದಲ್ಲಿ ನಡೆಸುವಂತೆ ವಕೀಲರ ಸಂಘ ಈ ಹಿಂದೆ ಜಯಚಂದ್ರ ಅವರಲ್ಲಿ ಮನವಿ ಮಾಡಿತ್ತು.
Advertisement
ವಕೀಲರ ಸಂಘ ಮನವಿ ಮಾಡಿದ ಸಂದರ್ಭದಲ್ಲಿ ಭರವಸೆ ನೀಡಿದ್ದ ಜಯಚಂದ್ರ ನಂತರ ಮರೆತಿದ್ದರು. ಈಗ ಜಯಚಂದ್ರ ಅವರು ವಕೀಲರ ಬಳಿ ಮತ ಕೇಳಲು ಬಂದಿದ್ದಾರೆ. ಸಚಿವರು ಬಂದ ಹಿನ್ನೆಲೆಯಲ್ಲಿ ವಕೀಲರು ಹಿಂದೆ ನೀಡಿದ್ದ ಭರವಸೆ ಏನಾಯ್ತು ಎಂದು ಪ್ರಶ್ನಿಸಿ ಜಯಚಂದ್ರ ಅವರನ್ನು ಇಂದು ತರಾಟೆಗೆ ತೆಗೆದುಕೊಂಡರು.
Advertisement
ಗೃಹ ಇಲಾಖೆ ಮತ್ತು ಕನೂನು ಸಚಿವಾಲಯಕ್ಕೆ ಬಹಳಷ್ಟು ಸಲ ವಕೀಲರ ಸಂಘದಿಂದ ಮನವಿಯನ್ನು ಸಲ್ಲಿಸಿದ್ದೇವೆ. ನಮ್ಮ ಕಕ್ಷೀದಾರರೇ ನಿಮ್ಮ ಮತದಾರರು ಅನ್ನುವುದನ್ನು ಮರೆಯಬಾರದು. ಕಾನೂನು ಸಚಿವರಾಗಿ ನೀವೇ ಮಾಡಿಲ್ಲ ಅಂದರೆ ಏನರ್ಥ? ಮತ ಕೇಳಲು ನಿಮಗೆ ಹೇಗೆ ಹಕ್ಕಿದೆಯೋ ಅದೇ ರೀತಿಯಾಗಿ ನಮ್ಮ ಬೇಡಿಕೆ ಈಡೇರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಪ್ರಶ್ನಿಸಿ ಸಚಿವರಿಗೆ ವಕೀಲರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.