– ಬೆಂಗಳೂರಲ್ಲಿ ಸಭೆ ನಡೆಸಿದ್ದಕ್ಕೆ ರೈತರ ಆಕ್ರೋಶ
ಬೆಂಗಳೂರು/ಕೊಪ್ಪಳ: ಜಿಲ್ಲೆಯ ತುಂಗಭದ್ರಾ ಜಲಾಶಯ (Tundabhadra Dam) ಕರ್ನಾಟಕ (Karnataka) ಸೇರಿ ಮೂರು ರಾಜ್ಯಗಳ ಲಕ್ಷಾಂತರ ಜನರಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಆಧಾರವಾಗಿದೆ. ಸದ್ಯ ಜಲಾಶಯದ ನೀರನ್ನು ಹಂಚಿಕೆ ಮಾಡುವ ವಿಚಾರವಾಗಿ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಿತು.
Advertisement
ಗುರುವಾರ ಬೆಂಗಳೂರಿನ (Bengaluru) ವಿಕಾಸಸೌಧದಲ್ಲಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಜಲಾಶಯದಲ್ಲಿ ಸದ್ಯ ಉಳಿದಿರುವ ನೀರನ್ನು ಹಂಚಿಕೆ ಮಾಡುವ ವಿಚಾರವಾಗಿ ಚರ್ಚೆ ನಡೆಸಲಾಯಿತು. ಜೊತೆಗೆ ಎಡದಂಡೆ ಕಾಲುವೆ, ಎಡದಂಡೆ ವಿಜಯನಗರ ಕಾಲುವೆ, ಬಲದಂಡೆ ಮೇಲ್ಮಟ್ಟದ ಕಾಲುವೆ, ಬಲದಂಡೆ ಕೆಳಮಟ್ಟದ ಕಾಲುವೆ, ರಾಯಬಸಣ್ಣ ಕಾಲುವೆ, ಎಡದಂಡೆ ಮೇಲ್ಮಟ್ಟದ ಕಾಲುವೆಗಳಿಗೆ ಯಾವ ಸಮಯದಲ್ಲಿ ಎಷ್ಟು ನೀರನ್ನು ಬಿಡಬೇಕು ಎನ್ನುವ ಕುರಿತು ನಿರ್ಧರಿಸಲಾಯಿತು.ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಐಸಿಸಿ
Advertisement
Advertisement
ಜಿಲ್ಲೆಯ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯ, ಕರ್ನಾಟಕ ಸೇರಿ ಮೂರು ರಾಜ್ಯಗಳ ಲಕ್ಷಾಂತರ ಜನರಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಆಧಾರವಾಗಿದೆ. ಈ ಜಲಾಶಯ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಜನರಿಗೆ ಜೀವನದಿಯಾಗಿದೆ. ಜೊತೆಗೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದ ಅನೇಕ ಜಿಲ್ಲೆಯ ಜನರು ಕೂಡ ಇದೇ ಜಲಾಶಯದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.
Advertisement
ಈ ಜಲಾಶಯದ ನೀರನ್ನು ನಂಬಿ ಸರಿಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಸುತ್ತಮುತ್ತಲಿರುವ ಅನೇಕ ಪಟ್ಟಣಗಳು, ಗ್ರಾಮಗಳಿಗೆ ಕುಡಿಯುವ ನೀರಿನ ಮೂಲ ಕೂಡ ತುಂಗಭದ್ರಾ ಜಲಾಶಯ. ಜೊತೆಗೆ ಜಲಾಶಯ ನೀರಿನಿಂದ ಹತ್ತಾರು ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಜಲಾಶಯದಲ್ಲಿರುವ ನೀರನ್ನು ಯಾರಿಗೂ ತೊಂದರೆಯಾಗದಂತೆ ಹಂಚಿಕೆ ಮಾಡಬೇಕಾದ ಕೆಲಸ ಇದೀಗ ಆರಂಭವಾಗಿದೆ.
ಇನ್ನು 105.788 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈ ಬಾರಿ ಕ್ರಸ್ಟ್ಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ, ಜಲಾಶಯವನ್ನು ಸಂಪೂರ್ಣವಾಗಿ ಭರ್ತಿ ಮಾಡಿರಲಿಲ್ಲ. ಗರಿಷ್ಟ 102 ಟಿಎಂಸಿ ವರೆಗೆ ಮಾತ್ರ ನೀರನ್ನು ಸಂಗ್ರಹಿಸಲಾಗಿತ್ತು. ಈಗಾಗಲೇ 500ಕ್ಕೂ ಅಧಿಕ ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಸದ್ಯ ಜಲಾಶಯದಲ್ಲಿ ಒಟ್ಟು 96.648 ಟಿಎಂಸಿ ನೀರು ಸಂಗ್ರಹವಿದೆ. ಇದೀಗ ಜಲಾಶಯದಲ್ಲಿ 3,600 ಕ್ಯೂಸೆಕ್ ನೀರಿನ ಒಳಹರಿವು ಹಾಗೂ 4,800 ಕ್ಯೂಸೆಕ್ ನೀರಿನ ಹೊರಹರಿವು ಇದೆ.
ಇದೀಗ ಜಲಾಶಯ ಇರುವ ಸ್ಥಳದಲ್ಲಿಯೇ ಸಭೆ ನಡೆಸುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಸಭೆ ನಡೆಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ವೇಳೆ ಕೊಪ್ಪಳದಲ್ಲಿಯೇ ಸಭೆ ನಡೆಸಿದ್ದರೆ ರೈತರು ಕೂಡ ಸಭೆಯಲ್ಲಿ ಭಾಗಿಯಾಗಿ ತಮ್ಮ ಸಲಹೆಗಳನ್ನು ನೀಡಬಹುದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾದ ICBM ದಾಳಿ – 60 ವರ್ಷಗಳ ಇತಿಹಾಸದಲ್ಲೇ ಯುದ್ಧಕ್ಕೆ ಕ್ಷಿಪಣಿ ಮೊದಲ ಬಳಕೆ