– ತಾತ್ಕಾಲಿಕವಾಗಿ ಅಳವಡಿಸಿದ ಗೇಟ್‌ಗಳಿಗೆ ನೀರಲ್ಲೇ ವೆಲ್ಡಿಂಗ್
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ (Stop Log Gate) ಅಳವಡಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ತಾಂತ್ರಿಕ ವರ್ಗಕ್ಕೆ 2 ಲಕ್ಷ ರೂ. ಬಹುಮಾನ ನೀಡಿ ಕೊಪ್ಪಳ (Koppal) ಸಂಸದ ರಾಜಶೇಖರ ಹಿಟ್ನಾಳ್ (Rajashekar Hitnal) ಗೌರವಿಸಿದ್ದಾರೆ.
Advertisement
ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿಹೋಗಿದ್ದ 19ನೇ ಗೇಟ್‌ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಕಾರ್ಯಾಚರಣೆಯಲ್ಲಿ ಭಾಗಿಯಾದ ತಾಂತ್ರಿಕ ವರ್ಗಕ್ಕೆ (Technical Team) 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದ್ದಾರೆ.ಇದನ್ನೂ ಓದಿ: TB Dam- ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ
Advertisement
Advertisement
ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಸೇರಿ ಇಡೀ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕ್ರಸ್ಟ್ ಗೇಟ್‌ಗೆ ಸ್ಟಾಪ್ ಲಾಗ್ ಎಲಿಮೆಂಟ್ ಅಳವಡಿಕೆ ಅಪರೇಷನ್ ಸಕ್ಸಸ್ ಹಿನ್ನೆಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ (J N Ganesh) ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Advertisement
ಅಲ್ಲದೇ ಸಚಿವ ಜಮೀರ್ ಅಹಮ್ಮದ್ ಭರವಸೆ ನೀಡಿದಂತೆ ಕಾರ್ಯಕ್ರಮದಲ್ಲಿ ತಲಾ 50 ಸಾವಿರ ರೂ. ನಗದು ನೀಡಿ ಗೌರವಿಸಿದ್ದಾರೆ. ಜೊತೆಗೆ ನಾರಾಯಣ್ ಎಂಜಿನಿಯರಿಂಗ್, ಹಿಂದೂಸ್ತಾನಿ ಎಂಜಿನಿಯರಿಂಗ್ ಹಾಗೂ ಜಿಂದಾಲ್ ಕಂಪನಿ ಪ್ರತಿನಿಧಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಇದನ್ನೂ ಓದಿ : TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ
ತಾತ್ಕಾಲಿಕವಾಗಿ ಅಳವಡಿಸಿದ ಗೇಟ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಲೀಕ್ ಆಗುತ್ತಿತ್ತು. ಆದರಿಂದ ತಾತ್ಕಾಲಿಕವಾಗಿ ಅಳವಡಿಸಿದ ಗೇಟ್‌ಗಳಿಗೆ ನೀರಲ್ಲೆ ವೆಲ್ಡಿಂಗ್ ಮಾಡುವ ಕೆಲಸ ಆರಂಭಿಸಿದ್ದಾರೆ. ಆಕ್ಸಿಜನ್ ಕಿಟ್‌ಗಳನ್ನು ಹಾಕಿಕೊಂಡು ಜೀವದ ಹಂಗು ತೊರೆದು ಸಿಬ್ಬಂದಿ ಗೇಟ್ ವೆಲ್ಡಿಂಗ್ ಮಾಡುತ್ತಿರುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಟಿಬಿ ಡ್ಯಾಂ ಮಂಡಳಿ ತಿಳಿಸಿದೆ.