ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್‍ಗಳಿಗೆ ತೆರಿಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ವೃತ್ತಿ ತೆರಿಗೆ ಪಾವತಿಸದ ಸ್ಟಾರ್ ನಟನಟಿಯರಿಗೆ ತೆರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಘಟಾನುಘಟಿ ನಟನಟಿಯರಿಂದ ಹಿಡಿದು ಹಲವಾರು ಕಿರುತೆರೆ ಸ್ಟಾರ್ಸ್ ವೃತ್ತಿ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 800 ಕ್ಕೂ ಹೆಚ್ಚು ಕಲಾವಿದರಿಗೆ ತೆರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ನೋಟಿಸ್ ಪಡೆದ ನಟರು: ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ರಾಕಿಂಗ್ ಸ್ಟಾರ್ ಯಶ್, ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ಶ್ರೀ ಮುರಳಿ, ವಿಜಯ್ ರಾಘವೇಂದ್ರ, ದೇವರಾಜ್, ಪ್ರಜ್ವಲ್ ದೇವರಾಜ್, ಶರಣ್, ದೂದ್‍ಪೇಡ ದಿಗಂತ್, ಲೂಸ್ ಮಾದ ಯೋಗಿ, ಜೋಗಿ ಪ್ರೇಮ್, ದುನಿಯಾ ವಿಜಿ, ವಿನೋದ್ ಪ್ರಭಾಕರ್, ಚಿರು ಸರ್ಜಾ
Advertisement
ನೋಟಿಸ್ ಪಡೆದ ನಟಿಯರು: ರಾಧಿಕ ಪಂಡಿತ್, ಪ್ರಿಯಾಂಕ ಉಪೇಂದ್ರ, ಸ್ಯಾಂಡಲ್‍ವುಡ್ ಕ್ವೀನ್ ರಮ್ಯ, ರಕ್ಷಿತಾ ಪ್ರೇಮ್, ರಚಿತಾ ರಾಮ್, ರಾಗಿಣಿ ದ್ವಿವೇದಿ, ಅಮೂಲ್ಯ, ಮಾಲಾಶ್ರೀ, ಭಾವನ, ಪೂಜಾ ಗಾಂಧಿ, ಶೃತಿ, ಅನು ಪ್ರಭಾಕರ್
Advertisement
ಇವರಷ್ಟೇ ಅಲ್ಲದೆ ಹಾಸ್ಯ ನಟರಾದ ಚಿಕ್ಕಣ್ಣ, ಸಾಧು ಕೋಕಿಲಾ, ರಂಗಾಯಣ ರಘು, ರವಿಶಂಕರ್, ಬುಲೆಟ್ ಪ್ರಕಾಶ್ ಹಾಗೂ ಹಿರಿಯ ನಟ ನಟಿಯರಾದ ಅವಿನಾಶ್, ಸುಮಲತಾ ಅಂಬರೀಶ್ ಕೂಡ ತೆರಿಗೆಯನ್ನ ಕಟ್ಟದೆ ನೋಟಿಸ್ ಪಡೆದಿದ್ದಾರೆ.
Advertisement
ನೋಟಿಸ್ ಪಡೆದ ಮೇಲೆ ನೇರವಾಗಿ ಕಚೇರಿಗೆ ಬಂದು ತೆರಿಗೆ ಜೊತೆಗೆ ದಂಡ ಮತ್ತು ಬಡ್ಡಿಯನ್ನ ನಟ ಜಗ್ಗೇಶ್, ಮಾಸ್ಟರ್ ಆನಂದ್, ನಿರೂಪಕಿ ಅನುಶ್ರೀ, ರಾಜೇಶ್ ಕೃಷ್ಣನ್, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ ಮತ್ತಿತರೆ ನಟರು ಪಾವತಿ ಮಾಡಿದ್ದಾರೆ. ಎಜಿ ವರದಿಯ ಪ್ರಕಾರ ಕೇವಲ 70 ಜನ ಮಾತ್ರ ಇಲ್ಲಿವರೆಗೆ ವೃತ್ತಿ ತೆರಿಗೆ ಪಾವತಿಸಿದ್ದಾರಂತೆ.
Advertisement
ಕರ್ನಾಟಕದಲ್ಲಿ ಎಲ್ಲಿ ಯಾವುದೇ ವೃತ್ತಿ ಮಾಡ್ತಿದ್ರೂ ವೃತ್ತಿ ತೆರಿಗೆ ಅಂತ ವಾರ್ಷಿಕವಾಗಿ 2,500 ರೂಪಾಯಿ ಪಾವತಿಸಲೇಬೇಕು. ಆದ್ರೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು, ನಿರೂಪಕರು, ಗಾಯಕರು, ನಿರ್ದೇಶಕರು, ವಿತಕರು ವೃತ್ತಿ ತೆರಿಗೆಯನ್ನ ಕಳೆದ ಐದು ವರ್ಷದಿಂದ ಕಟ್ಟಿಲ್ಲ ಎಂದು ವೃತ್ತಿ ತೆರಿಗೆ ಜಂಟಿ ಆಯುಕ್ತರಾದ ಕೆ ರಾಮನ್ ಹೇಳಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ ಒಂದ್ರಲ್ಲಿಯೇ ತಿಂಗಳಿಗೆ 50 ರಿಂದ 55 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತೆ. ಅದ್ರೇ ಚಿತ್ರರಂಗದ ಅನೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ಅವ್ರಿಗೆಲ್ಲಾ ಇ-ಮೇಲ್‍ನಲ್ಲೂ ನೋಟಿಸ್ ನೀಡಿದ್ದಾರೆ. ಈ ವಿಚಾರದಲ್ಲಿ ಟೈಗರ್ ಪ್ರಭಾಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾವು ಬದುಕಿರುವವರೆಗೂ ವೃತ್ತಿ ತೆರಿಗೆಯನ್ನ ಪ್ರತೀ ವರ್ಷ ತಪ್ಪದೇ ಕಟ್ಟಿದ್ದಾರೆ ಅಂತ ತಿಳಿದುಬಂದಿದೆ.