– ವಾಯುವಿಹಾರಿಗಳಿಗೆ ತಿಂಗಳಿಗೆ 300 ರೂ. ಶುಲ್ಕ?
ತುಮಕೂರು: ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ತೆರಿಗೆ ಬರೆ ಮುಂದುವರಿದಿದೆ. ವಾಯುವಿಹಾರಿಗಳ ಮೇಲೂ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿರುವ ವಿಲಕ್ಷಣ ಪ್ರಕರಣ ಬಯಲಾಗಿದೆ.
Advertisement
ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ತೆರಿಗೆ ಹಾಕ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತೆರಿಗೆ, ಶುಲ್ಕ ಅಂತ ರಾಜ್ಯ ಸರ್ಕಾರ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದೆ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಈ ಮಧ್ಯೆ ವಾಯುವಿಹಾರಿಗಳಿಗೂ, ಕ್ರೀಡಾಪಟುಗಳಿಗೂ ತೆರಿಗೆ ಹಾಕಲು ಸರ್ಕಾರ ಹೊರಟಿದೆ.
Advertisement
ಸರ್ಕಾರಿ ಕ್ರೀಡಾಂಗಣಗಳಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಹಾಗೂ ವಾಯುವಿಹಾರ ಮಾಡುವ ಸಾರ್ವಜನಿಕರಿಗೂ ಶುಲ್ಕ ವಿಧಿಸುವ ಸುತ್ತೋಲೆ ಹೊರಡಿಸಿದೆ. ಇದು ಇಡೀ ರಾಜ್ಯಾದ್ಯಂತ ಮಾ.1 ರಿಂದ ಜಾರಿಯಾಗಲಿದೆ. ವಿಶೇಷವಾಗಿ ತುಮಕೂರು ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣ ವಿಶ್ವ ದರ್ಜೆಯ ಸ್ಥಾನಕ್ಕೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರಾಕ್ಟಿಸ್ ಮಾಡುವ ಪ್ರತಿ ಕ್ರೀಡಾಪಟುಗಳಿಗೂ ವಾಕಿಂಗ್ ಮಾಡೋರಿಗೂ ಶುಲ್ಕ ವಿಧಿಸಲಾಗುತ್ತದೆ. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ವಾಕ್ ಮಾಡುವ ವಯೋವೃದ್ಧರಿಗೆ ತಿಂಗಳಿಗೆ 300 ರೂ. ಶುಲ್ಕ ವಿಧಿಸುವ ಸುತ್ತೋಲೆ ಹೊರಡಿಸಲಾಗಿದೆ.
Advertisement
ಯುವ ಸಬಲೀಕರಣ & ಕ್ರೀಡಾ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ಏನಿದೆ?
* ವಾಯುವಿಹಾರಿಗಳಿಗೆ ಮಾಸಿಕ ಶುಲ್ಕ 300 ರೂ.
* ಕ್ರೀಡಾಪಟುಗಳಿಗೆ ವಾರ್ಷಿಕ ಶುಲ್ಕ 5000 ರೂ.
* ಕ್ರೀಡಾಪಟುಗಳಿಗೆ ಮಾಸಿಕ ಶುಲ್ಕ 500 ರೂ.
* ಬ್ಯಾಡ್ಮಿಂಟನ್ ಅಂಕಣಕ್ಕೆ 200 ರೂ. (ಪ್ರತಿ ಗಂಟೆಗೆ)
* ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಮಾಸಿಕ 150 ರೂ.
* ವಾಲಿಬಾಲ್, ಖೋಖೋ ಅಂಕಣಕ್ಕೆ ಮಾಸಿಕ 500 ರೂ.
* ಕಬ್ಬಡಿ, ಬಾಸ್ಕೆಟ್ ಬಾಲ್ ಅಂಕಣಕ್ಕೆ ಮಾಸಿಕ 500 ರೂ.
* ಮಲ್ಟಿ ಜಿಮ್ ಕ್ರೀಡಾಪಟುಗಳಿಗೆ ಮಾಸಿಕ 300 ರೂ.
* ಪ.ಜಾತಿ-ಪ.ಪಂಗಡ ಕ್ರೀಡಾಪಟುಗಳಿಗೆ 150 ರೂ.
* ಕ್ರೀಡಾಂಗಣ ಪ್ರವೇಶ ಗುರುತಿನ ಚೀಟಿ 50 ರೂ.
Advertisement
ಪ್ರತಿ ಕ್ರೀಡೆಗೂ ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ, ರಾಷ್ಟç, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಕೀರ್ತಿ ತಂದ ಕ್ರೀಡಾಪಟುಗಳಿಗೂ ಉಚಿತ ತರಬೇತಿ ಇಲ್ಲಿ ಸಿಗೋದಿಲ್ಲ. ಕ್ರೀಡಾಂಗಣ ನಿರ್ವಹಣೆ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಉಚಿತವಾಗಿ ತರಬೇತಿ ಕೊಡಬೇಕಾದ ಸರ್ಕಾರವೇ ಶುಲ್ಕ ವಿಧಿಸಲು ಮುಂದಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.