– ಮಧ್ಯಮ ವರ್ಗದ ಜನರ ಕನಸು ಮೋದಿ ಸರ್ಕಾರದಿಂದ ನನಸಾಗಿದೆ
– ಪ್ರತಿ ವರ್ಷ 20 ಸಾವಿರ ಕೋಟಿ ಉಳಿತಾಯ ಆಗ್ತಿದೆ
– ನಾನೂ ಬಡಕುಟುಂಬದಿಂದ ಬಂದವನು
ಬೆಂಗಳೂರು: 2014ಕ್ಕೂ ಮುನ್ನ ವಾರ್ಷಿಕ ಆದಾಯ 2 ಲಕ್ಷ ಮೀರಿದವರಿಗೆ ಆದಾಯ ತೆರಿಗೆ ಬೀಳುತ್ತಿತ್ತು. ಆದ್ರೆ ಈಗ 7 ಲಕ್ಷ ರೂ. ವೆರೆಗೆ ತೆರಿಗೆ ಕಟ್ಟುವಂತಿಲ್ಲ. ಅಲ್ಲದೇ ಈ ಹಿಂದೆ ಬಟ್ಟೆ ಬಿಲ್, ಹೋಟೆಲ್ ಊಟದ ಬಿಲ್‌ಗೂ ತೆರಿಗೆ ಪಡೆಯುತ್ತಿದ್ದರು. ಜಿಎಸ್‌ಟಿ ಅನುಷ್ಠಾನಗೊಂಡ ಬಳಿಕ ಪರೋಕ್ಷ ತೆರಿಗೆಗಳಿಗೆ ತೆರೆ ಬಿದ್ದಿದೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷದಲ್ಲಿ ತಮ್ಮ ಸರ್ಕಾರದಲ್ಲಿ ಆದ ಸಾಧನೆಗಳನ್ನು ಬಣ್ಣಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 28 ಸ್ಥಾನ ಗೆಲ್ಲಿಸೋಣ, ಆಮೇಲೆ ಕಾವೇರಿ, ಕೃಷ್ಣ ನೀರು ಕೊಡಿ ಅಂತ ಮೋದಿಯನ್ನ ಕೇಳೋಣ: ದೇವೇಗೌಡ
Advertisement
ಪ್ರತಿವರ್ಷ 20 ಸಾವಿರ ಕೋಟಿ ರೂ. ಉಳಿತಾಯ:
ಈ ಹಿಂದೆ ಎಲ್‌ಇಡಿ ಬಲ್ಬ್ 400 ರೂ. ಇತ್ತು. ಈಗ 40 ರೂ.ಗೆ ಇಳಿಕೆಯಾಗಿದೆ. ಬಡ, ಮಧ್ಯಮ ವರ್ಗದ ಜನರೂ ಮನೆ-ಮನೆಗಳಲ್ಲೂ ಎಲ್‌ಇಡಿ ಬಲ್ಬ್ ಉಪಯೋಗಿಸುತ್ತಿದ್ದಾರೆ. ಇದರಿಂದ ವಿದ್ಯುತ್ ಸಹ ಉಳಿತಾಯವಾಗುತ್ತಿದೆ. ಪ್ರತಿ ವರ್ಷ ಸರಿಸುಮಾರು 20,000 ಕೋಟಿ ರೂ. ಉಳಿತಾಯವಾಗುತ್ತಿದೆ. ಈಗ ಉಚಿತ ವಿದ್ಯುತ್ ಕಲ್ಪಿಸಲು ಹಾಗೂ ವಿದ್ಯುತ್ ನಿಂದ ಗಳಿಕೆ ಮಾಡಲು ಸೂರ್ಯ ಘರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ವಿವರಿಸಿದ್ದಾರೆ.
Advertisement
ಇಷ್ಟು ದೊಡ್ಡ ಬದಲಾವಣೆ ಕಂಡಿದ್ದು ನಿಮ್ಮ ಮತದಿಂದ:
ವಿಶ್ವದ ಅನೇಕ ರಾಷ್ಟ್ರಗಳು ಭಾರತದ ಗೆಳೆತನ ಬಯಸುತ್ತಿವೆ. ಹೂಡಿಕೆದಾರರು ದಾಖಲೆ ಪ್ರಮಾಣದಲ್ಲಿ ಹೂಡಿಕೆ ಮಾಡ್ತಿದ್ದಾರೆ. ರಫ್ತು, ಉತ್ಪಾದನೆಯಲ್ಲೂ ಭಾರತ ದಾಖಲೆ ಮಾಡುತ್ತಿದೆ. ಅಲ್ಲದೇ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ, ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿದೆ. ಈಗ ಭಾರತ ಅನುಸರಿಸುವ ದೇಶವಲ್ಲ, ಮುನ್ನುಗ್ಗುವ ದೇಶವಾಗಿದೆ. ಕಳೆದ 10 ವರ್ಷಗಳಲ್ಲಿ ಈ ಬದಲಾವಣೆ ಆಗಿದೆ ಎಂದು ತಮ್ಮ ಸರ್ಕಾರದ ಪ್ರಮುಖ ಸಾಧನೆಗಳನ್ನು ಬಣ್ಣಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಮೋದಿ
Advertisement
ಕಳೆದ 10 ವರ್ಷಗಳಲ್ಲಿ ಈ ಬದಲಾವಣೆ ತರಲು ಕಾರಣ ಏನು? ಈ ಬದಲಾವಣೆ ತಂದಿದ್ದು ಯಾರು? ಇಷ್ಟು ದೊಡ್ಡ ಬದಲಾವಣೆ ಬಂದಿದ್ದು ಹೇಗೆ? ಮೋದಿ ನೇರೆದಿದ್ದ ಜನರನ್ನ ಪ್ರಶ್ನಿಸಿದರು. ಅದಕ್ಕೆ ಜನ `ಮೋದಿ ಮೋದಿ’ ಎಂದು ಕೂಗುತ್ತಿದ್ದಂತೆ ನೀವು ತಪ್ಪು ಉತ್ತರ ಹೇಳಿದ್ದೀರಿ? ಈ ಬದಲಾಬಣೆ ಬಂದಿದ್ದು ನಿಮ್ಮ ಒಂದು ಮತದಿಂದ ಎಂದು ಮೋದಿ ಹೇಳುತ್ತಿದ್ದಂತೆ ಜನ ಶಿಳ್ಳೆ ಚಪ್ಪಾಳೆಯ ಮಳೆಗರೆದರು.
Advertisement
ಮೋದಿ ಫೋಕಸ್ ವಿಕಸಿತ ಭಾರತ ಮಾತ್ರ:
ಮೋದಿ ಟ್ರ್ಯಾಕ್ ರೆಕಾರ್ಡ್‌ನೊಂದಿಗೆ ಜನರ ಆಶೀರ್ವಾದ ಪಡೆಯೋದಕ್ಕೆ ಬಂದಿದ್ದಾನೆ. ಈಗ ಎನ್‌ಡಿಎ, ಇಂಡಿಯಾ ಒಕ್ಕೂಟ ಎರಡೂ ಪಕ್ಷಗಳ ಪ್ರಚಾರವನ್ನೂ ನೀವು ಗಮನಿಸುತ್ತಿದ್ದೀರಿ, ಇಂಡಿಯಾ ಒಕ್ಕೂಟ ಕೇವಲ ಮೋದಿಯ ವಿರುದ್ಧ ದೂಷಿಸುವುದನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ. ಆದ್ರೆ ಮೋದಿ ಫೋಕಸ್ ಭಾರತವನ್ನು ವಿಕಸನಗೊಳಿಸುದಾಗಿದೆ. ಭಾರತೀಯ ನಾಗರಿಕರ ಸಮೃದ್ಧಿ, ಭಾರತಕ್ಕೆ ಜಾಗತೀಕ ಹೆಗ್ಗಳಿಕೆ ತರುವುದಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗ್ತಿವೆ: ಮೋದಿ ಗುಡುಗು
ನಾನೂ ಬಡಕುಟುಂಬದಿಂದ ಬಂದವನು:
ನಾನೂ ಸಹ ಸಾಧಾರಣ ಬಡಕುಟುಂಬದಿಂದ ಬಂದವನು. ಆದ್ದರಿಂದ ಬಡವರ ಕಷ್ಟ ನನಗೆ ಗೊತ್ತಿದೆ. ಬಡವರು ಜೀವನ ಮಟ್ಟದಲ್ಲಿ ಸುಧಾರಣೆ ತರಬೇಕಿದೆ. ಅದಕ್ಕೆ ಮತ್ತೊಮ್ಮೆ ಎನ್‌ಡಿಎ ಸರ್ಕಾರ ಬರಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಮೋದಿ ಸರ್ಕಾರ ಮಧ್ಯಮ ವರ್ಗದ ಮನೆಗಳ ಕನಸು ನನಸು ಮಾಡಿದೆ. ರೇರಾ ಕಾಯ್ದೆ ತಂದು ಜನರಿಗೆ ಮೋಸಗೊಳಿಸುವುದನ್ನು ತಡೆಗಟ್ಟಿದೆ. ಕಳೆದ 10 ವರ್ಷಗಳಲ್ಲಿ 1 ಕೋಟಿ ಪಕ್ಕಾ ಮನೆಗಳನ್ನು ಬಡವರಿಗೆ ನೀಡಿದೆ. ಈ ಮನೆಗಳಿಗೆ ಸರ್ಕಾರದಿಂದಲೇ ಸಹಾಯಧನ ಒದಗಿಸುವ ಮೂಲಕ 60 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಹಣ ಉಳಿತಾಯ ಮಾಡಿದೆ ಎಂದು ಸರ್ಕಾರದ ಸಾಧನೆಗಳನ್ನು ಬಣ್ಣಿಸಿದ್ದಾರೆ.