ಮುಂಬೈ: ಮಾರ್ಚ್ 4 ರಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭವಾಗುತ್ತಿದ್ದು, ಬಿಸಿಸಿಐ (BCCI) ಸಕಲ ಸಿದ್ಧತೆ ಮಾಡಿಕೊಂಡಿದೆ.
A star ⭐ studded line-up
D.Y.Patil Stadium will be set for an evening of glitz and glamour ????????
???????? ???????????? ???????????????? the opening ceremony of #TATAWPL
Grab your tickets ???? now on https://t.co/c85eyk7GTA pic.twitter.com/2dj4L8USnP
— Women’s Premier League (WPL) (@wplt20) March 1, 2023
Advertisement
ಟೂರ್ನಿಯ ಮೊದಲ ಪಂದ್ಯ ಮುಂಬೈನ (Mumbai) ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಸಂಜೆ 5:30ಕ್ಕೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ `ಪರಮ್ ಸುಂದರಿ’ ಹಾಡಿನ ಖ್ಯಾತಿಯ ಕೃತಿ ಸನೋನ್ (Kriti Sanon) ಭರ್ಜರಿ ನೃತ್ಯ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿ
Advertisement
Advertisement
ಇದರೊಂದಿಗೆ ಜನಪ್ರಿಯ ಪಂಜಾಬಿ ಗಾಯಕ ಎ.ಪಿ ಧಿಲ್ಲೋನ್ ತಮ್ಮ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಡಬ್ಲ್ಯೂಪಿಎಲ್ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು
Advertisement
ಚೊಚ್ಚಲ ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಮಾರ್ಚ್ 4 ರಿಂದ 21ರ ವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಮಾರ್ಚ್ 24 ರಂದು ಪ್ಲೆ ಆಫ್ ಹಾಗೂ ಮಾರ್ಚ್ 26ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.