Districts

ಅಕ್ರಮವಾಗಿ ಪಡಿತರ ಅಕ್ಕಿ ತುಂಬಿಕೊಂಡು ಹೋಗುತ್ತಿದ್ದ ಟಾಟಾ ಸುಮೋ ಪಲ್ಟಿ

Published

on

Share this

ಕೋಲಾರ: ಅಕ್ರಮವಾಗಿ ಪಡಿತರ ಅಕ್ಕಿ ತುಂಬಿಕೊಂಡು ಹೋಗುತ್ತಿದ್ದ ಟಾಟಾ ಸುಮೋ ಡಿವೈಡರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಕೆಜಿಎಫ್‍ನ ಆಲದಮರದ ಬಳಿ ನಡೆದಿದೆ.

ತಮಿಳುನಾಡಿಗೆ ಸೇರಿದ ಪಡಿತರ ಅಕ್ಕಿಯನ್ನು ಹಲವು ಬಾರಿ ರೈಲಿನ ಮೂಖಾಂತರ ಕಳ್ಳಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಟಾಟಾ ಸುಮೋದಲ್ಲಿ ಸುಮಾರು 30 ಮೂಟೆಯಷ್ಟು ಪಡಿತರ ಅಕ್ಕಿಯನ್ನು ತುಂಬಿಕೊಂಡು ತಮಿಳುನಾಡು ಕಡೆಯಿಂದ ಬಂಗಾರಪೇಟೆ ಕಡೆಗೆ ಬರಲಾಗುತ್ತಿತ್ತು. ಈ ಸಂದರ್ಭದಲ್ಲಿ ಮುಂಜಾನೆ ಸುಮಾರು 6 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಕೆಜಿಎಫ್‍ನ ಆಲದಮರದ ಬಳಿ ಇರುವ ಡಿವೈಡರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಟಾಟಾ ಸುಮೋ ಪಲ್ಟಿಯಾದ ಪರಿಣಾಮ ಒಳಗಡೆಯಿದ್ದ ಅಕ್ಕಿ ಮೂಟೆ ಒಡೆದು ಅಕ್ಕಿಯೆಲ್ಲಾ ರಸ್ತೆ ಪಾಲಾಗಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಬೆಮಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Click to comment

Leave a Reply

Your email address will not be published. Required fields are marked *

Advertisement
Advertisement