ಚಂಡೀಗಡ್: ಟಾಟಾ ಸ್ಟೀಲ್ ಮ್ಯಾನೇಜರ್ ಒಬ್ಬರನ್ನು ಅದೇ ಕಂಪನಿಯ ಮಾಜಿ ನೌಕರ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹರಿಯಾಣದ ಫರಿದಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅರಿಂದಾಲ್ ಪಾಲ್ (40) ಮೃತ ದುರ್ದೈವಿ. ಶುಕ್ರವಾರ ಮಧ್ಯಾಹ್ನ ಫರಿದಾಬಾದಿನ ಹಾರ್ಡ್ ವೇರ್ ರಸ್ತೆಯಲ್ಲಿರುವ ಟಾಟಾ ಸ್ಟೀಲ್ ತಯಾರಿಕಾ ಘಟಕದಲ್ಲಿ, ಎಂದಿನಂತೆ ಮ್ಯಾನೇಜರ್ ಅರಿಂದಾಲ್ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಚೇರಿಗೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಅವರ ಮೇಲೆ 4-5 ಬಾರಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದನು.
Advertisement
#Haryana: Senior Manager of Tata Steel shot dead by former employee in Faridabad. Mujesar SHO says,“Bullets were shot at senior manager by a former employee.He died on the way to the hospital. In initial reports,doctors say he was shot with 5 bullets. Post-mortem reports awaited” pic.twitter.com/CNWhngKhAJ
— ANI (@ANI) November 9, 2018
Advertisement
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾಲ್ ರನ್ನು ಕಚೇರಿಯ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದರು. ಆಸ್ಪತ್ರೆಯಿಂದ ಮ್ಯಾನೇಜರ್ ಹತ್ಯೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ, ನಾನು ಆಸ್ಪತ್ರೆಗೆ ಕಡೆ ಹೊರಟೆ, ಆದರೆ ನಾನು ತಲುಪುವಷ್ಟರಲ್ಲಿ ಅರಿಂದಾಲ್ ಪಾಲ್ ಮೃತಪಟ್ಟಿದ್ದರೆಂದು ಮುಜೆಶರ್ ಪೊಲೀಸ್ ಠಾಣಾ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.
Advertisement
ಮ್ಯಾನೇಜರ್ ಪಾಲ್‍ಗೆ ಗುಂಡಿನ ದಾಳಿ ನಡೆಸಿದ್ದು, ಅದೇ ಸಂಸ್ಥೆಯ ಮಾಜಿ ನೌಕರ 32 ವರ್ಷದ ವಿಶ್ವಾಸ್ ಪಾಂಡೆಯಾಗಿದ್ದಾನೆ. ಆರೋಪಿ ಪಾಂಡೆ ಟಾಟಾ ಕಂಪನಿಯಲ್ಲಿ ಕಳೆದ 4 ವರ್ಷಗಳಿಂದ (2015-2018) ಕೆಲಸ ನಿರ್ವಹಿಸಿತ್ತಿದ್ದ. ಅಲ್ಲದೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಆರೋಪಿಯನ್ನು ಕೆಲಸದಿಂದ ಹೊರಹಾಕಲಾಗಿತ್ತು. ಘಟನೆ ಸಂಬಂಧ ಆರೋಪಿ ವಿಶ್ವಾಸ್ ಪಾಂಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಪಾಂಡೆಗಾಗಿ ತೀವ್ರ ಶೋಧ ನಡೆಸುತ್ತಿದ್ದೇವೆ. ಸದ್ಯ ಪಾಲ್ ರವರ ಮೃತ ದೇಹವನ್ನ ಫರಿದಾಬಾದ್‍ನ ಬಾದ್‍ಷಾ ಖಾನ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಭಾನುವಾರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.
Advertisement
ಮ್ಯಾನೇಜರ್ ಅರಿಂದಾಲ್ ಪಾಲ್ ಹತ್ಯೆಯ ಕುರಿತು ಟಾಟಾ ಸ್ಟೀಲ್ಸ್ ಪ್ರೋಸೆಸಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ಕಂಪನಿ ಸಂತಾಪ ಸೂಚಿಸಿದೆ. ಪಾಲ್ ಅವರು ಹೆಂಡತಿ, ಮಗಳು ಮತ್ತು ತಂದೆ-ತಾಯಿಯನ್ನ ಅಗಲಿದ್ದಾರೆ. ಮೃತ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡಲಿದೆ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews