ನವದೆಹಲಿ: ಏರ್ ಇಂಡಿಯಾ ಟಾಟಾ ತೆಕ್ಕೆಗೆ ಮರಳಿದೆ. ಕೇಂದ್ರ ಸರ್ಕಾರದ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದುಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಸ್, ಟ್ರಕ್ ಮಧ್ಯೆ ಭೀಕರ ಅಪಘಾತಕ್ಕೆ 7 ಬಲಿ – 14 ಮಂದಿ ಗಂಭೀರ
Advertisement
ಈ ವಿಚಾರದ ಬಗ್ಗೆ ಟಾಟಾ ಕಂಪನಿಯ ವಕ್ತಾರರು ಮತ್ತು ಹಣಕಾಸು ಸಚಿವಾಲಯ ಅಧಿಕೃತವಾಗಿ ತಿಳಿಸಿಲ್ಲ. ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಬಿಡ್‍ನಲ್ಲಿ ಕೊನೆಯಲ್ಲಿ ಅಜಯ್ ಸಿಂಗ್ ಅವರ ಸ್ಪೈಸ್ ಜೆಟ್ ಕಂಪನಿ ಮತ್ತು ಟಾಟಾ ಸನ್ಸ್ ಇತ್ತು.
Advertisement
ಕೇಂದ್ರ ಸರ್ಕಾರ ಬಿಡ್‍ಗೆ 15-20 ಸಾವಿರ ಕೋಟಿ ರೂ. ಹಣವನ್ನು ಮೂಲ ಬೆಲೆಯಾಗಿ ಇಟ್ಟಿತ್ತು ಎಂದು ವರದಿಯಾಗಿತ್ತು. ಟಾಟಾ ಕಂಪನಿ ಮೂಲ ಬೆಲೆಗಿಂತಲೂ 3 ಸಾವಿರ ಕೋಟಿ ಮತ್ತು ಸ್ಪೈಸ್ ಜೆಟ್‍ಗಿಂತಲೂ 5 ಸಾವಿರ ಕೋಟಿ ಹೆಚ್ಚು ಬಿಡ್ ಮಾಡಿತ್ತು ಎಂದು ವರದಿಯಾಗಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಶೀಘ್ರವೇ ಬಿಡ್ ಅಂತಿಮಗೊಳಿಸಿ ಕೆಲ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ- ಮಹಾ ನೆರೆಯ ಭೀತಿ
Advertisement
Advertisement
2007ರಲ್ಲಿ ಇಂಡಿಯನ್ ಏರ್‍ಲೈನ್ಸ್ ವಿಲೀನದ ಬಳಿಕ ಏರ್ ಇಂಡಿಯಾ ನಷ್ಟವನ್ನು ಅನುಭವಿಸುತ್ತಿದ್ದು 90 ಸಾವಿರ ಕೋಟಿಗೂ ಅಧಿಕ ಸಾಲದ ಸುಳಿಯಲ್ಲಿದೆ. ಏರ್ ಇಂಡಿಯಾ ಸೇವೆಯಿಂದ ಪ್ರತಿದಿನ ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಮುಂದಿನ 4 ತಿಂಗಳಿನಲ್ಲಿ ಏರ್ ಇಂಡಿಯಾವನ್ನು ಪೂರ್ಣವಾಗಿ ಟಾಟಾ ಕಂಪನಿಗೆ ಸರ್ಕಾರ ಹಸ್ತಾಂತರಿಸಲಿದೆ. ಖರೀದಿಯ ಬಳಿಕ ಟಾಟಾಗೆ 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಸಿಗಲಿದೆ.
2019ರ ಲೋಕಸಭಾ ಚುನಾವಣೆಗೂ ಮೊದಲೇ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಶೇ.76 ರಷ್ಟು ಷೇರನ್ನು ಮಾರಾಟ ಮಾಡಿ ಶೇ.24 ರಷ್ಟು ಷೇರನ್ನು ತನ್ನ ಬಳಿ ಇಡುವ ಕೇಂದ್ರದ ಪ್ರಸ್ತಾಪಕ್ಕೆ ಬಿಡ್ ಮಾಡಲು ಯಾರೂ ಆಸಕ್ತಿ ತೋರಿಸಿರಲಿಲ್ಲ. ಇದನ್ನೂ ಓದಿ: ಗುದನಾಳದಲ್ಲಿ 42 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್- ವ್ಯಕ್ತಿ ವಶಕ್ಕೆ
ಎರಡನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಶೇ.100 ರಷ್ಟು ಖಾಸಗೀಕರಣಕ್ಕೆ ಮುಂದಾಗಿತ್ತು. ಈ ಮಧ್ಯೆ ಕೋವಿಡ್ ಕಾರಣದಿಂದ ಬಿಡ್ ಪ್ರಕ್ರಿಯೆ ವಿಳಂಬವಾಗಿತ್ತು. 2018ರ ಬಿಡ್ಡಿಂಗ್ ಪ್ರಕ್ರಿಯೆ ಸಮಯದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖರೀದಿಸಿ ಲಾಭ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ಇಂಡಿಗೋ ಹೇಳಿತ್ತು.
1932ರಲ್ಲಿ ಜೆ.ಆರ್.ಡಿ ಟಾಟಾ ಏರ್ ಇಂಡಿಯಾವನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಸಿಕ್ಕಿದ ಬಳಿಕ 1947ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಾಗಲೇ ಭಾರತದಲ್ಲಿ ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‍ಲೈನ್ಸ್ ಜೊತೆಯಾಗಿ ವಿಸ್ತಾರಾ ಏರ್ ಲೈನ್ಸ್ ಸೇವೆ ನೀಡುತ್ತಿದೆ.