ನವದೆಹಲಿ: ಏರ್ ಇಂಡಿಯಾ (Air India) ಅಧ್ಯಕ್ಷರಾಗಿ ಟಾಟಾ ಸನ್ಸ್ ಗ್ರೂಪ್ನ (Tata Group) ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ಅವರನ್ನು ಆಯ್ಕೆ ಮಾಡಲಾಗಿದೆ.
ಟಾಟಾ ಗ್ರೂಪ್, ಟರ್ಕಿಯ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಎಂದು ತಿಂಗಳ ಆರಂಭದಲ್ಲಿ ಘೋಷಿಸಿತ್ತು. ಆದರೆ ಆ ನೇಮಕಾತಿಯು ಭಾರತದಲ್ಲಿ ಸಾಕಷ್ಟು ವಿರೋಧವನ್ನು ಎದುರಿಸಿತು. ಬಳಿಕ ಟರ್ಕಿಯ ಇಲ್ಕರ್ ಐಸಿ ಅವರು ಟಾಟಾದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕರಾಗಲು ನಿರಾಕರಿಸಿದ್ದರು. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ
Advertisement
Advertisement
ಚಂದ್ರಶೇಖರನ್ ಅವರು ಟಾಟಾ ಸನ್ಸ್ನ ಮುಖ್ಯಸ್ಥರಾಗಿದ್ದಾರೆ. ಹಿಡುವಳಿ ಕಂಪನಿ ಮತ್ತು 100 ಕ್ಕೂ ಹೆಚ್ಚು ಟಾಟಾ ಆಪರೇಟಿಂಗ್ ಕಂಪನಿಗಳ ಪ್ರವರ್ತಕರಾಗಿದ್ದಾರೆ. ಅವರು ಅಕ್ಟೋಬರ್ 2016 ರಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದರು. ಜನವರಿ 2017 ರಲ್ಲಿ ಮುಖ್ಯಸ್ಥರಾಗಿ ನೇಮಕಗೊಂಡರು.
Advertisement
ಚಂದ್ರಶೇಖರನ್ ಅವರು ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸೇರಿದಂತೆ ಹಲವಾರು ಗ್ರೂಪ್ ಆಪರೇಟಿಂಗ್ ಕಂಪನಿಗಳ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದಾರೆ. ಅವರು 2009-17 ರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್ ಇಂಡಿಯಾ ಎಂದ ರತನ್ ಟಾಟಾ
Advertisement
ಚಂದ್ರಶೇಖರನ್ ಅವರು ಟಾಟಾ ಗ್ರೂಪ್ನ ಮುಖ್ಯಸ್ಥರಾದ ಮೊದಲ ಪಾರ್ಸಿಯೇತರ ಮತ್ತು ವೃತ್ತಿಪರ ಕಾರ್ಯನಿರ್ವಾಹಕರಾಗಿದ್ದರು.