ಸಿಡ್ನಿ: ಭಾರತದ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರಿಗೆ ಆಸ್ಟ್ರೇಲಿಯಾ ಸರ್ಕಾರವು ಅತ್ಯುನ್ನತ ನಾಗರಿಕ ಪ್ರಶಸ್ತಿ (Order of Australia) ನೀಡಿ ಗೌರವಿಸಿದೆ.
ಆಸ್ಟ್ರೇಲಿಯಾ ಸರ್ಕಾರವು ಪ್ರಶಸ್ತಿ ನೀಡುತ್ತಿರುವ ಫೋಟೋವನ್ನು ಆಸ್ಟ್ರೇಲಿಯಾದ (Australia) ರಾಯಭಾರಿ ಬ್ಯಾರಿ ಓ ಫಾರೆಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರತನ್ ಟಾಟಾರನ್ನು ಉದ್ಯಮ, ವ್ಯಾಪಾರ ಹಾಗೂ ಲೋಕೋಪಕಾರದ ದೈತ್ಯ ಎಂದು ಶ್ಲಾಘಿಸಿದರು. ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿ ಮಹತ್ವದ ಪ್ರಭಾವ ಬೀರಿವೆ ಎಂದು ತಿಳಿಸಿದರು.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?: ರತನ್ ಟಾಟಾ ಅವರ ಉದ್ಯಮ ಮತ್ತು ಲೋಕೋಪಕಾರದ ಟೈಟನ್ ಆಗಿದ್ದಾರೆ. ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿಯೂ ಗಮನಾರ್ಹ ರೀತಿಯಲ್ಲಿ ಪ್ರಭಾವ ಬೀರಿವೆ. ಆಸ್ಟ್ರೇಲಿಯಾ-ಭಾರತ ಸಂಬಂಧಕ್ಕೆ ರತನ್ ಟಾಟಾ ಅವರ ದೀರ್ಘಕಾಲದ ಶ್ರಮವನ್ನು ಗುರುತಿಸಿ Order of Australia ಗೌರವವನ್ನು ನೀಡಲು ಸಂತೋಷವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರ ಸರ್ಕಾರ: ಸಿದ್ದರಾಮಯ್ಯ ವ್ಯಂಗ್ಯ
Advertisement
Ratan Tata is a titan of biz, industry & philanthropy not just in ????????, but his contributions have also made a significant impact in ????????. Delighted to confer Order of Australia (AO) honour to @RNTata2000 in recognition of his longstanding commitment to the ????????????????relationship. @ausgov pic.twitter.com/N7e05sWzpV
— Barry O’Farrell AO (@AusHCIndia) April 22, 2023
Advertisement
ಫಾರೆಲ್ ತಮ್ಮ ಟ್ವೀಟ್‍ನಲ್ಲಿ ರತನ್ ಟಾಟಾ ಅವರನ್ನು ಗೌರವಿಸುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಆಸ್ಟ್ರೇಲಿಯನ್ ರಾಯಭಾರಿ ಹಂಚಿಕೊಂಡ ಫೋಟೋಗಳಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಸಹ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: Mood Of Karnataka ಚಾಪ್ಟರ್ 2 – ಕಾಂಗ್ರೆಸ್ಸಿಗಿಲ್ಲ ಬಹುಮತ, ಮೊದಲಿಗಿಂತ ಬಿಜೆಪಿ ಸ್ವಲ್ಪ ಸುಧಾರಣೆ