ಮುಂಬೈ: ಟಾಟಾ ಸಮೂಹದ (Tata Group) ಮುಖ್ಯಸ್ಥ ಹಾಗೂ ಉದ್ಯಮಿಯಾಗಿದ್ದ ರತನ್ ಟಾಟಾ (Ratan Tata) ಅವರ ಉತ್ತರಾಧಿಕಾರಿಯಾಗಿ ಅವರ ಕುಟುಂಬದ ಸದಸ್ಯೆಯೇ ಆಗಿರುವ ಮಾಯಾ ಟಾಟಾ (Maya Tata) ಅವರು ನೇಮಕಗೊಳ್ಳುವ ಸಾಧ್ಯತೆ ಇದೆ.
ಈ ವಿಚಾರವಾಗಿ ಆ.29ರಂದು ನಡೆಯಲಿರುವ ಟಾಟಾ ಸಮೂಹದ ವಾರ್ಷಿಕ ಮಹಾಸಭೆಯಲ್ಲಿ ನಿಧಾರ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Cauvery Water : ಇಂದು ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ
Advertisement
Advertisement
34 ವರ್ಷದ ಮಾಯಾ ಟಾಟಾ ಅವರು ರತನ್ ಟಾಟಾ ಅವರ ಮಲಸೋದರ ನಿಯೋಲ್ ಟಾಟಾ ಹಾಗೂ ಆಲೂ ಮಿಸ್ತ್ರಿ ದಂಪತಿಯವರ ಪುತ್ರಿ. ಆಲೂ ಮಿಸ್ತ್ರಿ ಅವರು ಇತ್ತೀಚೆಗೆ ನಿಧನರಾದ ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರ ಸಹೋದರಿ.
Advertisement
Advertisement
ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಮಾಯಾ ಟಾಟಾ ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಆಡಳಿತ ಮಂಡಳಿಯಲ್ಲಿ ಇತ್ತೀಚೆಗೆ ಸ್ಥಾನ ಪಡೆದಿದ್ದಾರೆ. ಇದು ಇಡೀ ಸಮೂಹದ ಮುಖ್ಯಸ್ಥೆಯನ್ನಾಗಿ ಅವರನ್ನು ಘೋಷಿಸಲು ಕೈಗೊಂಡ ತೀರ್ಮಾನ ಎಂದು ವರದಿಯಾಗಿತ್ತು. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್
Web Stories