ಏರ್‌ಬಸ್‌-ಬೋಯಿಂಗ್‌ ಜೊತೆ ಮೆಗಾ ಡೀಲ್‌: ವಿಶ್ವದಾಖಲೆ ನಿರ್ಮಿಸಿದ ಏರ್‌ ಇಂಡಿಯಾ

Public TV
4 Min Read
Tata Group Seals Biggest Deal In Aviation History To Buy 250 Airbus 200 boeing Aircraft For Air India

ನವದೆಹಲಿ: ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 470 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಿದೆ.

ಫ್ರಾನ್ಸಿನ ಏರ್‌ಬಸ್‌ನಿಂದ (Air Bus) 250 ಮತ್ತು ಅಮೆರಿಕದ ಬೋಯಿಂಗ್‌ನಿಂದ (Boeing) 220 ವಿಮಾನಗಳನ್ನು ಏರ್‌ ಇಂಡಿಯಾದಿಂದ ಖರೀದಿಸಲಿದೆ. ಒಟ್ಟು 420 ಸಣ್ಣ, ಮಧ್ಯಮ ಗಾತ್ರ ಮತ್ತು 40 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ (Air India) ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್‌ ಇಂಡಿಯಾವನ್ನು ಸೇರಲಿದೆ.

ಈ ಹಿಂದೆ ಅಮೆರಿಕನ್ ಏರ್‌ಲೈನ್ಸ್‌ (American Airlines) 460 ವಿಮಾನಗಳನ್ನು ಆರ್ಡರ್‌ ಮಾಡುವ ಮೂಲಕ ದಾಖಲೆ ಮಾಡಿತ್ತು. 2019 ರಲ್ಲಿ ಇಂಡಿಗೋ (Indigo) 300 ವಿಮಾನ ಖರೀದಿಗೆ ಆರ್ಡರ್‌ ಮಾಡಿತ್ತು.

ಫ್ರಾನ್ಸ್‌ನ ಏರ್‌ಬಸ್‌ ಸಂಸ್ಥೆಯಿಂದ 40 ಭಾರೀಗಾತ್ರದ ಎ350 ವಿಮಾನಗಳನ್ನು, 20 ಬೋಯಿಂಗ್‌ 787 ಎಸ್‌, 10 ಬೋಯಿಂಗ್‌ 777-9ಎಸ್‌, 210 ಎರ್‌ಬಸ್‌ ಎ320/321 ನಿಯೋ, 190 ಬೋಯಿಂಗ್‌ ಮ್ಯಾಕ್ಸ್‌ ವಿಮಾನಗಳನ್ನು ವಿಮಾನಗಳನ್ನು ಖರೀದಿಸಲು ಟಾಟಾ ಮಾಲಿಕತ್ವದ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ.  ಇದನ್ನೂ ಓದಿ: ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ನಿವ್ವಳ ಲಾಭ – ಷೇರು ಬೆಲೆ ಜಿಗಿತ

ಏರ್‌ಬಸ್‌ ಜೊತೆ ಒಪ್ಪಂದ
ಏರ್‌ಬಸ್‌ ಜೊತೆ ಒಪ್ಪಂದ ಈ ಕ್ಷಣಕ್ಕೆ ಪ್ರಧಾನಿ ಮೋದಿ, ಟಾಟಾ ಸಂಸ್ಥೆ ಮುಖ್ಯಸ್ಥ ರತನ್ ಟಾಟಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರಾನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷಿಯಾದರು.

ಏರ್ ಇಂಡಿಯಾದ ಪುನಶ್ಚೇತನಕ್ಕಾಗಿ ಏರ್ ಬಸ್ ಸಂಸ್ಥೆ ಸಹಾಯ ಮಾಡಲಿದೆ. ಇದು ಐತಿಹಾಸಿಕ ಕ್ಷಣ ಎಂದು ಏರ್‌ಬಸ್‌ ಚೀಫ್ ಎಕ್ಸಿಕ್ಯೂಟೀವ್ ಗೀಲಮ್ ಫೌರಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ವೈಮಾನಿಕ ಕ್ಷೇತ್ರದಲ್ಲಿ ಮೂರನೇ ಅತಿದೊಡ್ಡ ದೇಶವಾಗಿ ಭಾರತ ಹೊರಹೊಮ್ಮಲಿದೆ. ಮುಂದಿನ 15 ವರ್ಷದಲ್ಲಿ ಭಾರತಕ್ಕೆ 2500 ಏರ್‌ಕ್ರಾಫ್ಟ್‌ ಬೇಕಾಗುತ್ತವೆ ಎಂದು ಮೋದಿ ಹೇಳಿದ್ದಾರೆ.

ಬೋಯಿಂಗ್‌ ಜೊತೆ ಡೀಲ್‌:
ಏರ್‌ಬಸ್‌ ಡೀಲ್‌ ಅಧಿಕೃತವಾದ ಬೆನ್ನಲ್ಲೇ ಟಾಟಾ ಕಂಪನಿ ಅಮೆರಿಕದ ಬೋಯಿಂಗ್‌ ಜೊತೆ 200 ವಿಮಾನ ಖರೀದಿಗೆ ಒಪ್ಪಂದ ಮಾಡಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಈ ಡೀಲ್‌ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದರು.

ಏರ್ ಇಂಡಿಯಾ ಮತ್ತು ಬೋಯಿಂಗ್ ನಡುವಿನ ಐತಿಹಾಸಿಕ ಒಪ್ಪಂದದ ಮೂಲಕ 220 ಅಮೆರಿಕನ್ ನಿರ್ಮಿತ ವಿಮಾನಗಳ ಖರೀದಿಸಲಿದೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ಖರೀದಿ ಒಪ್ಪಂದಿಂದ ಅಮೆರಿಕದ 44 ರಾಜ್ಯಗಳಲ್ಲಿ ಒಟ್ಟು 10 ಲಕ್ಷ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ. ಈ ಘೋಷಣೆ ಅಮೆರಿಕ -ಭಾರತದ ಆರ್ಥಿಕ ಪಾಲುದಾರಿಕೆಯ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಘೋಷಿಸಿದ್ದಾರೆ.

Air India

 

ಎ350 ವಿಮಾನ ವಿಶೇಷವೇನು?
ಏಕಕಾಲದಲ್ಲಿ 17,000 ಕಿ.ಮೀ ಹಾರುವ ಸಾಮರ್ಥ್ಯ ಹೊಂದಿರುವ ಈ ವಿಮಾನವನ್ನು 3 ಕ್ಲಾಸ್ ಆಗಿ ವಿಭಜಿಸಿದರೆ 410 ಪ್ರಯಾಣಿಕರು ಪ್ರಯಾಣಿಸಬಹುದು. ಸಿಂಗಲ್ ಕ್ಲಾಸ್ ವಿಮಾನವಾದರೆ 480 ಪ್ರಯಾಣಿಕರನ್ನು ಕರೆದೊಯ್ಯಬಹುದು.

ಕೋವಿಡ್‌ ಬಳಿಕ ಭಾರತದಲ್ಲಿ ವಿಮಾನಯಾನ ಕ್ಷೇತ್ರ ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಏರ್‌ ಇಂಡಿಯಾ ಮೊದಲೇ ಆರ್ಡರ್‌ ಬುಕ್ಕಿಂಗ್‌ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು 30% ಗೆ ಹೆಚ್ಚಿಸುವ ಗುರಿಯನ್ನು ಏರ್‌ ಇಂಡಿಯಾ ಹಾಕಿಕೊಂಡಿದೆ. 2024ರ ಅಂತ್ಯದ ವೇಳೆಗೆ ಏರ್ ಇಂಡಿಯಾಗೆ 50 ಹೊಸ ವಿಮಾನಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.

ಇಂಡಿಗೋಗೆ ಸ್ಪರ್ಧೆ ನೀಡಲು 5-6 ಗಂಟೆಯ ಒಳಗಡೆ ದೇಶದ ವಿವಿಧ ಸ್ಥಳಗಳನ್ನು ತಲುಪಲು ಸಣ್ಣ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ ಮುಂದಾಗಿದೆ. ಅಮೆರಿಕ, ಯುರೋಪ್ ದೇಶಗಳಿಗೆ ಸೇವೆ ನೀಡಲು ದೊಡ್ಡ ಗಾತ್ರ ವಿಮಾನಗಳನ್ನು ಖರೀದಿಸುತ್ತಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *