ನವದೆಹಲಿ: ಅಟೋಮೊಬೈಲ್, ಸಾಫ್ಟ್‌ವೇರ್ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಟಾಟಾ ಸಮೂಹ (Tata Group) ಸ್ಮಾರ್ಟ್‌ಫೋನ್ ಉದ್ಯಮಕ್ಕೆ ಕೈ ಹಾಕುವ ಸಾಧ್ಯತೆಯಿದೆ.
ಆಪಲ್(Apple) ಕಂಪನಿಯ ಐಫೋನ್‌ಗಳನ್ನು(iPhone) ಉತ್ಪಾದನೆ ಮಾಡಲು ಟಾಟಾ ಕಂಪನಿ ಚಿಂತನೆ ನಡೆಸಿದ್ದು, ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂಬ ವರದಿ ಪ್ರಕಟವಾಗಿದೆ.
Advertisement
ಪ್ರಸ್ತುತ ಐಫೋನ್‌ಗಳನ್ನು ತೈವಾನ್ ಮೂಲದ ಫಾಕ್ಸ್‌ಕಾನ್ (Foxconn) ಮತ್ತು ವಿಸ್ಟ್ರಾನ್(Wistron ) ಕಂಪನಿ ತಯಾರಿಸುತ್ತಿದೆ. ಬಹುತೇಕ ಐಫೋನ್‌ಗಳ ಉತ್ಪಾದನೆ ಚೀನಾ ಮತ್ತು ತೈವಾನ್‌ನಲ್ಲಿ ಆಗುತ್ತಿದೆ. ಪ್ರಸ್ತುತ ಬಹುತೇಕ ದೇಶಗಳು ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಟಾಟಾ ಭಾರತದಲ್ಲೇ ಐಫೋನ್ ಉತ್ಪಾದನೆ ಮಾಡುವ ಕುರಿತು ಮಾತುಕತೆ ಆರಂಭಿಸಿದೆ.
Advertisement
Advertisement
Advertisement
ಈಗಾಗಲೇ ಫಾಕ್ಸ್‌ಕಾನ್ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. ಈಗ ವಿಸ್ಟ್ರಾನ್ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್ ಸ್ಟ್ರೈಕ್ – ಐಫೋನ್ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ
2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
2021ರಲ್ಲಿ ಆಪಲ್ ಕಂಪನಿ ಭಾರತದಲ್ಲಿ 75 ಲಕ್ಷ ಐಫೋನ್ ಉತ್ಪಾದನೆ ಮಾಡಿತ್ತು. 2022ರಲ್ಲಿ 1-2 ಕೋಟಿ ಫೋನ್ ಉತ್ಪಾದನೆ ಮಾಡಲು ಮುಂದಾಗಿದೆ.
ವಿಶ್ವದ ಐಫೋನ್ ಮಾರಾಟದಲ್ಲಿ ಕಳೆದ ವರ್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್ ಪೈಕಿ ಶೇ.85 ರಷ್ಟು ಫೋನುಗಳು ಮೇಡ್ ಇನ್ ಇಂಡಿಯಾ ಫೋನ್ ಆಗಿರುವುದು ವಿಶೇಷ.