ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಕರ್ವ್ (Tata Curvv) – ಎಸ್‌ಯುವಿ ಕೂಪ್‌ನ ಪೆಟ್ರೋಲ್ ಮತ್ತು ಡಿಸೇಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಟಾಟಾ ಕರ್ವ್ ಬೆಲೆ 9.99 – 17.69 ಲಕ್ಷದವರೆಗೆ ಇದೆ (ಎಕ್ಸ್ ಷೋರೂಮ್). ಈ ಬೆಲೆಯು ಅಕ್ಟೊಬರ್ 31ರವರೆಗೆ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಸೆಪ್ಟೆಂಬರ್ 12ರಿಂದ ಕಾರಿನ ಡೆಲಿವರಿ ಶುರುವಾಗಲಿದೆ.
Advertisement
ಹೊಸ ATLAS ಪ್ಲಾಟ್‌ಫಾರ್ಮ್ ಆಧರಿಸಿದ Curvv ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಹೊಸ ಹೈಪರಿಯನ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ 125hp ಪವರ್ ಮತ್ತು 225Nm ಟಾರ್ಕ್ ಉತ್ಪಾದಿಸುತ್ತದೆ. 1.5ಲೀ ಕ್ರಯೋಜೆಟ್ ಡೀಸೆಲ್ ಎಂಜಿನ್ 118hp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಮತ್ತು 1.2 ಲೀ ರೆವೊಟ್ರಾನ್ ಪೆಟ್ರೋಲ್ ಎಂಜಿನ್ 120hp ಪವರ್ ಮತ್ತು 170Nm ಟಾರ್ಕ್ ಉತ್ಪಾದಿಸುತ್ತದೆ. ಮಲ್ಟಿ-ಡ್ರೈವ್ ಮೋಡ್‌ಗಳು, ಪ್ಯಾಡಲ್ ಶಿಫ್ಟರ್‌ಗಳು, ಸ್ಮಾರ್ಟ್ ಇ-ಶಿಫ್ಟರ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಕರ್ವ್ ಒಳಗೊಂಡಿದೆ. ಈ ಸೆಗ್ಮೆಂಟ್ ಕಾರುಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ಎಂಜಿನ್‌ನಲ್ಲಿ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ನೀಡಲಾಗಿದೆ. ಇದನ್ನೂ ಓದಿ: ಕೀಬೋರ್ಡ್‌ನಲ್ಲಿ ಡಾಲರ್ ಬದಲು ರುಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ
Advertisement
Advertisement
ಟಾಟಾ ಕರ್ವ್ ಕಾರಿನ ಒಳಾಂಗಣ ವಿನ್ಯಾಸ ನೆಕ್ಸಾನ್ ಕಾರನ್ನು ಹೋಲುವಂತಿದೆ. 31.24 ಸೆಂಮೀ (12.3) ಹರ್ಮನ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 26.03 ಸೆಂಮೀನ (10.25) ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮತ್ತು iRA ಕನೆಕ್ಟೆಡ್ ಕಾರ್ ತಂತ್ರಜ್ಞಾನವು ಈ ಅತ್ಯಾಧುನಿಕ ಕಾರಿನಲ್ಲಿದೆ. ಸ್ಟೇರಿಂಗ್ ವೀಲ್ ಅನ್ನು ಹ್ಯಾರಿಯರ್ ಕಾರಿನಿಂದ ಎರವಲು ಪಡೆಯಲಾಗಿದೆ.
Advertisement
ಭಾರತದ ಅತ್ಯಂತ ಸುರಕ್ಷಿತ ಕಾರ್ ತಯಾರಿಸುವ ಕಂಪನಿ ಎಂಬ ಹೆಗ್ಗಳಿಕೆ ಪಡೆದಿರುವ ಟಾಟಾ ಮೋಟಾರ್ಸ್, ಕರ್ವ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಸಿಸ್ಟಮ್ ಮತ್ತು 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯನಿರ್ವಹಣೆಯನ್ನು ಲೆವಲ್ 2 ADAS ಮಾಡಲಿದೆ. ಈ ಎಸ್‌ಯುವಿ ಕೂಪ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ. ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?
ಕನೆಕ್ಟೆಡ್ ಟೈಲ್-ಲ್ಯಾಂಪ್‌ಗಳು, ಅಲಾಯ್ ವೀಲ್ಸ್, ಮೂಡ್ ಲೈಟಿಂಗ್ ಜೊತೆಗೆ ವಾಯ್ಸ್ ಅಸಿಸ್ಟೆಡ್ ಪ್ಯಾನಾರಮಿಕ್ ಸನ್‌ರೂಫ್, ಫ್ಲಶ್ ಡೋರ್ ಹ್ಯಾಂಡಲ್ ಮತ್ತಿತರ ವಿಶೇಷತೆಗಳನ್ನು ಕರ್ವ್ ಹೊಂದಿದೆ. ಟಾಟಾ ಕರ್ವ್ ಕಾರು ಗೆಶ್ಚರ್ ಕಂಟ್ರೋಲ್ ಹೊಂದಿರುವ ಟೈಲ್‌ಗೇಟ್ ಹೊಂದಿದ್ದು, ಇದ್ದು ಈ ವಿಭಾಗದ ಕಾರುಗಲ್ಲಿ ಇದೆ ಮೊದಲು. ನೀವು ನಿಮ್ಮ ಕಾಲನ್ನು ಹಿಂಬದಿಯ ಬಂಪರ್ ಕೆಳಗೆ ಅಲುಗಾಡಿಸಿದರೆ ಸಾಕು ಟೈಲ್‌ಗೇಟ್ ಓಪನ್ ಆಗತ್ತದೆ. 500ಲೀ ಬೂಟ್ ಸ್ಪೇಸ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 6-ವೇ ಅಡ್ಜಸ್ಟಬಲ್ ಡ್ರೈವರ್ ಸೀಟ್ ಮತ್ತು ರಿಕ್ಲೈನ್ ಮಾಡಬಹುದಾದ ಹಿಂಬದಿಯ ಆಸನಗಳು ಕಾರಿನಲ್ಲಿವೆ.
Curvv ಹೊಸ ಸಿಟ್ರೊಯೆನ್ ಬಸಾಲ್ಟ್ ಕೂಪ್-SUV ಜೊತೆ ನೇರವಾಗಿ ಸೆಣಸಲಿದೆ. ಮಧ್ಯಮ ಗಾತ್ರದ SUVಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹೋಂಡಾ ಎಲಿವೇಟ್, ಫೋಕ್ಸ್‌ವ್ಯಾಗನ್ ಟೈಗೂನ್, ಎಂಜಿ ಆಸ್ಟರ್ ಮತ್ತು ಸ್ಕೋಡಾ ಕುಶಾಕ್ ಕಾರುಗಳಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಕರ್ವ್ ಕಾರಿಗೆ ಇದೆ. ಇದನ್ನೂ ಓದಿ: ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್ ಪ್ಲಾಟ್ ಫಾರ್ಮ್ ಪರಿಚಯಿಸಿದ ಆಸ್ಟರಿಯಾ