ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಬಳಿ ನಡೆದ ಸಾರಿಗೆ ಬಸ್, ಟಾಟಾ ಏಸ್ (Tata Ace) ಹಾಗೂ ಬೈಕ್ ನಡುವಿನ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ.
ಟಾಟಾ ಏಸ್ ಚಾಲಕ ದಾವಣಗೆರೆ ಮೂಲದ ಮಹಾದೇವಪ್ಪ (37) ಮೃತ ದುರ್ದೈವಿ. ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ರಸ್ತೆಯಲ್ಲಿ ನರಳಾಡುತ್ತಿದ್ದ ಚಾಲಕನನ್ನ ಆಸ್ಪತ್ರೆಗೆ ದಾಖಲಿಸಿ ಸ್ಥಳೀಯರು ಮಾನವೀಯತೆ ಮೆರೆದಿದ್ದರು.
ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಅಪಘಾತ ವೇಳೆ ಬೈಕ್ ಸವಾರ ಬೈಕ್ ಬಿಟ್ಟು ಹಾರಿ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಅಪಘಾತದಿಂದ ಬಸ್, ಬೈಕ್, ಟಾಟಾ ಏಸ್ ನಜ್ಜುಗುಜ್ಜಾಗಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಹಿಟ್ & ರನ್ ಕೇಸ್ – ಕಾರು ಡಿಕ್ಕಿ, ಮೇಲಿಂದ ಹಾರಿದ ಯುವತಿ
ಈ ಸಂಬಂಧ ಬಳಗಾನೂರ ಪೊಲೀಸ್ ಠಾಣೆ (Balganura Police Station) ಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k