ಮನೆಯಲ್ಲಿ ಏನಾದ್ರೂ ಸುಲಭವಾಗಿ ನಾನ್ವೆಜ್ ಸ್ಟ್ರೀಟ್ ಫುಡ್ ಸ್ಟೈಲ್ನಲ್ಲಿ ಅಡುಗೆ ಮಾಡಬೇಕು ಎಂದುಕೊಂಡಿದ್ರೆ ಒಮ್ಮೆ ಸಿಂಗಾಪುರ್ ನೂಡಲ್ಸ್ ಮಾಡಿ. ಸಿಂಗಾಪುರ್ ನೂಡಲ್ಸ್ನ ಮೂಲ ಸಿಂಗಾಪುರ ಅಲ್ಲ ಬದಲಿಗೆ ಹಾಂಗ್ ಕಾಂಗ್ ಎನ್ನೋದು ಹಾಸ್ಯಕರ ಸಂಗತಿ. ಸಿಗಡಿ ಮೀನು ಹಾಗೂ ಪೋರ್ಕ್ನಿಂದ ಮಾಡೋ ಈ ರೆಸಿಪಿ ತುಂಬಾ ಸಿಂಪಲ್ ಆಗಿದ್ದು, ತಕ್ಷಣವೂ ತಯಾರಾಗುತ್ತದೆ. ಟೇಸ್ಟಿ ಸಿಂಗಾಪುರ್ ನೂಡಲ್ಸ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಅಕ್ಕಿ ನೂಡಲ್ಸ್ – 400 ಗ್ರಾಂ
ಬೇಯಿಸಿದ ಸಿಗಡಿ ಮೀನು – ಮಧ್ಯಮ ಗಾತ್ರದ 10
ತಳ್ಳಗೆ ಕತ್ತರಿಸಿದ ಪೋರ್ಕ್ – 250 ಗ್ರಾಂ
ಹೆಚ್ಚಿದ ಕೆಂಪು ಮೆಣಸು – 1
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 3 ಎಸಳು
ಮೊಟ್ಟೆ – 2
ಎಣ್ಣೆ – 3 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕರಿಬೇವು – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅಕ್ಕಿ ನೂಡಲ್ಸ್ ಅನ್ನು ಕುದಿಯುತ್ತಿರುವ ನೀರಿಗೆ ಹಾಕಿ 2-3 ನಿಮಿಷಗಳ ಕಾಲ ನೆನೆಸಿ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಆಫ್ ಮಾಡಿ, ನೀರನ್ನು ಹರಿಸಿ, ಪಕ್ಕಕ್ಕಿಡಿ.
* ಒಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಅದರಲ್ಲಿ ಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈಗ ಮೊಟ್ಟೆಯನ್ನು ಪಕ್ಕಕ್ಕಿಟ್ಟು ಬಾಣಲೆಯನ್ನು ಒರೆಸಿಕೊಳ್ಳಿ.
* ಈಗ ಮಧ್ಯಮ ಉರಿಯಲ್ಲಿ ಉಳಿದ ಎಣ್ಣೆಯನ್ನು ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
* ಉರಿಯನ್ನು ಕಡಿಮೆ ಮಾಡಿಕೊಂಡು ಕರಿಬೇವು ಹಾಗೂ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.
* ಕೆಂಪು ಮೆಣಸು ಸೇರಿಸಿ ಸುಮಾರು 2 ನಿಮಿಷ ಬೇಯಿಸಿ.
* ಬಳಿಕ ಹಂದಿ ಮಾಂಸವನ್ನು ಸೇರಿಸಿ 1 ನಿಮಿಷ ಬೇಯಿಸಿ.
* ಸ್ಪ್ರಿಂಗ್ ಆನಿಯನ್ ಹಾಗೂ ಸಿಗಡಿ ಸೇರಿಸಿ ಇನ್ನೊಂದು 30 ಸೆಕೆಂಡುಗಳ ಕಾಲ ಬೇಯಿಸಿ.
* ಈಗ ಬೇಯಿಸಿಟ್ಟಿದ್ದ ನೂಡಲ್ಸ್ ಹಾಗೂ ಸೋಯಾ ಸಾಸ್ ಹಾಗೂ ಉಪ್ಪು ಹಾಕಿ 1 ನಿಮಿಷ ಮಿಶ್ರಣ ಮಾಡಿ. ಬಳಿಕ ಹುರಿದಿಟ್ಟಿದ್ದ ಮೊಟ್ಟೆಯನ್ನು ಸೇರಿಸಿ.
* ಸಾಧ್ಯವಾದರೆ ನೂಡಲ್ಸ್ ಅನ್ನು ಸುಮಾರು 30 ಸೆಕೆಂಡುಗಳ ಕಾಲ ಹೆಚ್ಚಿನ ಉರಿಯಲ್ಲಿ ಟಾಸ್ ಮಾಡಿ.
* ಇದೀಗ ಟೇಸ್ಟಿ ಸಿಂಗಾಪುರ್ ನೂಡಲ್ಸ್ ತಯಾರಾಗಿದ್ದು, ಬೆಚ್ಚಗೆ ಬಡಿಸಿ. ಇದನ್ನೂ ಓದಿ: ಈ ಸೀಸನ್ನಲ್ಲಿ ಮಾಡಿ ಟೇಸ್ಟಿ ಮ್ಯಾಂಗೋ ಚಿಕನ್