ಹಸಿದವರಿಗೆ ಹಲಸು, ಉಂಡವರಿಗೆ ಮಾವು ಎಂಬ ಮಾತಿದೆ. ಹಲಸಿನ ಹಣ್ಣಿನ ಸೀಸನ್ ಶುರುವಾಗಿದೆ. ರುಚಿಯಾದ ಹಲಸು ಎಂತಹವರನ್ನೂ ಆಕರ್ಷಿಸುತ್ತದೆ. ಮಲೆನಾಡು, ಕರಾವಳಿ ಭಾಗದಲ್ಲಂತೂ ಹಲಸಿನ ಸೀಸನ್ ಮುಗಿಯುವವರೆಗೂ ಅದರದ್ದೇ ಕಾರುಬಾರು. ಹಲಸಿನ ಹಣ್ಣಿನಲ್ಲಿ ನಾನಾ ರೀತಿಯ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈ ಪೈಕಿ ಹಲಸಿನ ಹಣ್ಣಿನ ಗಟ್ಟಿ ಕೂಡ ಒಂದು. ಮಲೆನಾಡು, ಕರಾವಳಿ ಜನರಿಗೆ ಈ ತಿಂಡಿ ಅಚ್ಚುಮೆಚ್ಚು. ಈ ಭಾಗದ ಜನರನ್ನು ಬಿಟ್ಟು ಹೆಚ್ಚಿನವರಿಗೆ ಇದರ ಅರಿವಿರಲು ಸಾಧ್ಯವಿಲ್ಲ. ಇಂದು ನಾವು ನಿಮಗೆ ಸುಲಭವಾಗಿ ಹಲಸಿನ ಹಣ್ಣಿನ ಗಟ್ಟಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ನೀವೂ ನಿಮ್ಮ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.
ಹಲಸಿನ ಗಟ್ಟಿಗೆ ಬೇಕಾಗುವ ಪದಾರ್ಥಗಳು:
ಬೀಜ ತೆಗೆದ ಹಲಸಿನ ಹಣ್ಣು – 1 ಕಪ್ ಅಕ್ಕಿ
ತೆಂಗಿನ ತುರಿ – ಅರ್ಧ ಕಪ್
ಬೆಲ್ಲ – ಕಾಲು ಕಪ್
ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು
ಬಾಳೆ ಎಲೆಗಳು
ಮಾಡುವ ವಿಧಾನ:
*ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ.
*ಸುಲಭವಾಗಿ ರುಬ್ಬಲು ಹಲಸಿನ ಹಣ್ಣಿನ ತೊಳೆಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
*ಈಗ ಬಾಳೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅದನ್ನು ಹಬೆಯಲ್ಲಿ ಬೇಯಿಸಿ ಅಥವಾ ಒಲೆಯ ಮೇಲೆ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.
*ನೆನೆಸಿದ ಅಕ್ಕಿ, ಹಲಸು, ತೆಂಗಿನತುರಿ, ಬೆಲ್ಲ ಮತ್ತು ಉಪ್ಪನ್ನು ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಸೇರಿಸುವ ಅಗತ್ಯವಿಲ್ಲ
*ಬಳಿಕ ರುಬ್ಬಿಕೊಂಡ ಹಿಟ್ಟನ್ನು ಪಾತ್ರೆಗೆ ವರ್ಗಾಯಿಸಿ.
*ಹಿಟ್ಟು ದಪ್ಪವಾದ ಉದುರುವ ಸ್ಥಿರತೆಯನ್ನು ಹೊಂದಿರಬೇಕು.
*ನಂತರ ಒಂದು ಬಾಳೆ ಎಲೆಯ ಮೇಲೆ ಒಂದು ಹಿಡಿ ಹಿಟ್ಟು ಹಾಕಿ.
*ಬಳಿಕ ಅದನ್ನು ಅದನ್ನು ಆಯತಾಕಾರದಲ್ಲಿ ಮಡಿಸಿ.
*30 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.
*ಈಗ ಹಲಸಿನ ಹಣ್ಣಿನ ಗಟ್ಟಿ ಸವಿಲು ಸಿದ್ಧ