ರುಚಿಕರವಾದ ಚೈನೀಸ್ ಪೆಪ್ಪರ್ ಚಿಕನ್ ಅನ್ನು ಅನ್ನ ಅಥವಾ ನೂಡಲ್ಸ್ನೊಂದಿಗೆ ಸವಿಯಬಹುದು. ಸುಲಭ ಹಾಗೂ ತಕ್ಷಣವೇ ತಯಾರಿಸಬಹುದಾದ ಈ ರೆಸಿಪಿ ತಣ್ಣಗಿನ ದಿನಗಳಲ್ಲಿ ಬೆಚ್ಚಗೆ ಸವಿಯಲು ಮಜವೆನಿಸುತ್ತದೆ. ಚೈನೀಸ್ ಪೆಪ್ಪರ್ ಚಿಕನ್ ಮಾಡೋದು ಹೇಗೆಂದು ನಾವಿಂದು ನಿಮಗೆ ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಮೂಳೆಗಳಿಲ್ಲದ ಚಿಕನ್ – ಅರ್ಧ ಕೆಜಿ
ಮಧ್ಯಮ ಗಾತ್ರದಲ್ಲಿ ಹೆಚ್ಚಿದ ಕ್ಯಾಪ್ಸಿಕಮ್ – 1
ಕೊತ್ತಂಬರಿ ಸೊಪ್ಪು – 2
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2
ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಈರುಳ್ಳಿ – 1
ಕೊಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
ಸೋಯಾ ಸಾಸ್ – ಕಾಲು ಕಪ್
ಚಿಕನ್ ಸ್ಟಾಕ್ – ಕಾಲು ಕಪ್
ಕರಿಮೆಣಸಿನ ಪುಡಿ – 1 ಟೀಸ್ಪೂನ್
ಎಳ್ಳಿನ ಎಣ್ಣೆ – 1 ಟೀಸ್ಪೂನ್
ಸಕ್ಕರೆ – ಅರ್ಧ ಟೀಸ್ಪೂನ್
ಕಾರ್ನ್ಫ್ಲೋರ್ – 2 ಟೀಸ್ಪೂನ್
ಎಣ್ಣೆ – ಒಂದೂವರೆ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಕೊರಿಯನ್ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡೋದು ಹೇಗೆ ಗೊತ್ತಾ?
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಅನ್ನು ಸ್ವಚ್ಛಗೊಳಿಸಿ, ಬೈಟ್ಸ್ ಗಾತ್ರದಲ್ಲಿ ಕತ್ತರಿಸಿಕೊಳ್ಳಿ.
* ಅದಕ್ಕೆ ಅರ್ಧ ಟೀಸ್ಪೂನ್ ಕರಿಮೆಣಸಿನ ಪುಡಿ, 2 ಟೀಸ್ಪೂನ್ ಸೋಯಾ ಸಾಸ್, ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮ್ಯಾರಿನೇಟ್ ಆಗಲು ಪಕ್ಕಕ್ಕೆ ಇಡಿ.
* ಒಂದು ಬಟ್ಟಲಿನಲ್ಲಿ ಉಳಿದ ಸೋಯಾ ಸಾಸ್, ಎಳ್ಳಿನ ಎಣ್ಣೆ, ಚಿಕನ್ ಸ್ಟಾಕ್, ಉಳಿದ ಕರಿಮೆಣಸಿನ ಪುಡಿ ಸೇರಿಸಿ ಬೆರೆಸಿಕೊಳ್ಳಿ.
* ಇನ್ನೊಂದು ಪಿಂಗಣಿಯಲ್ಲಿ ಕಾರ್ನ್ ಫ್ಲೋರ್ ಹಾಗೂ ಅದಕ್ಕೆ ಸ್ವಲ್ಪ ನೀರು ಬೆರೆಸಿ, ಮಿಶ್ರಣ ಮಾಡಿ ಸ್ಲರಿ ತಯಾರಿಸಿ. ಇದನ್ನು ಸಾಸ್ ಮಿಶ್ರಣಕ್ಕೆ ಸೇರಿಸಿ.
* ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಸೇರಿಸಿ, ಹುರಿದುಕೊಳ್ಳಿ.
* ಚಿಕನ್ ಬೇಯುವ ವೇಳೆ ಈರುಳ್ಳಿ, ಕೊಚ್ಚಿದ ಬೆಳ್ಳುಳ್ಳಿ, ಕ್ಯಾಪ್ಸಿಕಮ್ ಸ್ಪ್ರಿಂಗ್ ಆನಿಯನ್ ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ.
* ಅದಕ್ಕೆ ತಯಾರಿಸಿಟ್ಟ ಸಾಸ್ ಬೆರೆಸಿ ಮಿಶ್ರಣ ದಪ್ಪವಾಗುವವರೆಗೆ ಟಾಸ್ ಮಾಡಿ. ಬಳಿಕ ಉರಿಯನ್ನು ಆಫ್ ಮಾಡಿ.
* ಇದೀಗ ಚೈನೀಸ್ ಪೆಪ್ಪರ್ ಚಿಕನ್ ತಯಾರಾಗಿದ್ದು, ನೂಡಲ್ಸ್ ಅಥವಾ ಅನ್ನದೊಂದಿಗೆ ಬೆಚ್ಚಗೆ ಸವಿಯಿರಿ. ಇದನ್ನೂ ಓದಿ: ಪಾರ್ಟಿಗೆ ಸ್ಟಾರ್ಟರ್ – ಮಟನ್ ಶಮಿ ಕಬಾಬ್ ಮಾಡಿ ನೋಡಿ
Advertisement
Web Stories