ಬ್ರೆಡ್ ಎಂದರೆ ಸಾಮಾನ್ಯವಾಗಿ ಸ್ಯಾಂಡ್ವಿಚ್, ಟೋಸ್ಟ್ ನೆನಪಿಗೆ ಬರುತ್ತದೆ. ಆದರೆ ಬ್ರೆಡ್ ಅಲ್ಲಿ ನಾನಾ ರೀತಿಯ ರೆಸಿಪಿಗಳನ್ನು ಮಾಡಬಹುದು. ಇದ್ರಲ್ಲಿ ಬ್ರೆಡ್ ಉಪ್ಪಿಟ್ಟು ಕೂಡ ಒಂದು. ಈ ಬ್ರೆಡ್ ಉಪ್ಪಿಟ್ಟು ಮಾಡಲು ತುಂಬಾ ಸುಲಭವಾಗಿದ್ದು, ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಮಕ್ಕಳ ಲಂಚ್ ಬಾಕ್ಸ್‌ಗೂ ಇದನ್ನು ಮಾಡಿಕೊಡಬಹುದು. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ಸಣ್ಣದಾಗಿ ಹೆಚ್ಚಿದ ಬ್ರೆಡ್ – 4
ಎಣ್ಣೆ – 2 ಚಮಚ
ಸಾಸಿವೆ – 1 ಚಮಚ
ಜೀರಿಗೆ – ಕಾಲು ಚಮಚ
ಸಣ್ಣದಾಗಿ ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೊ – ಅರ್ಧ ಕಪ್
ಶುಂಠಿ – 1 ಚಮಚ
ಕರಿಬೇವು
ಅರಿಶಿನ ಪುಡಿ – ಕಾಲು ಚಮಚ
ಕೊತ್ತಂಬರಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ, ಅದಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ.
*ಬಳಿಕ ಈರುಳ್ಳಿ ಸೇರಿಸಿ ಮತ್ತು ಚನ್ನಾಗಿ ಬೇಯಿಸಿ. ಹಾಗೆಯೇ ಅದಕ್ಕೆ ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಮಿಶ್ರಣ ಮಾಡಿ.
*ನಂತರ ಆ ಮಿಶ್ರಣಕ್ಕೆ ಟೊಮ್ಯಾಟೊ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ.
*ಈಗ ಅದಕ್ಕೆ ಬ್ರೆಡ್ ಸೇರಿಸಿ ಮತ್ತು ಐದು ನಿಮಿಷ ಬೇಯಿಸಿದರೆ ಬ್ರೆಡ್ ಉಪ್ಪಿಟ್ಟು ರೆಡಿ.
*ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಹಾಕಿ ಮಕ್ಕಳಿಗೆ ತಿನ್ನಲು ಕೊಡಿ.