ಚಳಿಯ ವಾತಾವರಣದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಅಂತಾ ಅನಿಸುವುದು ಸಹಜ. ಇವತ್ತಿನ ನಮ್ಮ ರೆಸಿಪಿಯಲ್ಲಿ ಟೇಸ್ಟಿಯಾದ ಆಲೂ ಪಾಲಕ್ ಕಟ್ಲೆಟ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಎಲ್ಲರಿಗೂ ತಿಳಿದಿರುವಂತೆ ಪಾಲಕ್ ಆರೋಗ್ಯಕರ ಆಹಾರ ಮಾತ್ರವಲ್ಲದೇ ಉತ್ತಮ ಪೌಷ್ಟಿಕಾಂಶದಿಂದ ಕೂಡಿದೆ. ಆಲೂ ಪಾಲಕ್ ಕಟ್ಲೆಟ್ ಅನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಕೂಡ ಇಷ್ಟಪಡುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಸುವರ್ಣಗಡ್ಡೆಯ ವಿಶೇಷತೆ ಏನು ಗೊತ್ತಾ? ಸಖತ್ ರುಚಿಯಾದ ಈ ರೆಸಿಪಿಯನ್ನು ನೀವೂ ಮಾಡಿ
Advertisement
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ – 2
ಪಾಲಕ್ ಸೊಪ್ಪು – 1 ಕಪ್
ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ – 1/4 ಚಮಚ
ಗರಂ ಮಸಾಲಾ – 1 ಚಮಚ
ಅರಿಶಿನ ಪುಡಿ – ಒಂದು ಚಿಟಿಕೆ
ಅಕ್ಕಿ ಹಿಟ್ಟು – 1 ಚಮಚ
ಮೆಣಸಿನ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
* ಮೊದಲು, ಆಲೂಗಡ್ಡೆಯನ್ನು ತೆಗೆದುಕೊಂಡು ಪಾತ್ರೆಯಲ್ಲಿ ನೀರಿನೊಂದಿಗೆ ಕುದಿಸಿ. ನಂತರ ಅವುಗಳ ಸಿಪ್ಪೆಯನ್ನು ತೆಗೆಯಿರಿ. ನಂತರ ಅದನ್ನು ಪಕ್ಕಕ್ಕೆ ಇಡಿ.
* ಬಳಿಕ ಈರುಳ್ಳಿ ಮತ್ತು ಪಾಲಕ್ ಸೊಪ್ಪನ್ನು ತೊಳೆದು ಸ್ವಚ್ಛಗೊಳಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ.
* ಈಗ ಅಗಲವಾದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.
* ಅದಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಪಾಲಕ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಗರಂ ಮಸಾಲ, ಅರಿಶಿನ ಪುಡಿ, ಮೆಣಸಿನ ಪುಡಿ, ಅಕ್ಕಿ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕಟ್ಲೆಟ್ ಮಿಶ್ರಣವನ್ನು ಮಾಡಿಕೊಳ್ಳಿ.
* ನಂತರ ಕಟ್ಲೆಟ್‌ಗಳನ್ನು ಹುರಿಯಲು ದೊಡ್ಡ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ.
* ಎಣ್ಣೆ ಚೆನ್ನಾಗಿ ಕಾಯುತ್ತಿದ್ದಂತೆ ತಯಾರಾದ ಕಟ್ಲೆಟ್ ಮಿಶ್ರಣವನ್ನು ಬೇಕಾದ ಆಕಾರದಲ್ಲಿ ಮಾಡಿಕೊಂಡು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಿಕೊಳ್ಳಿ.
* ಈಗ ಬಿಸಿಬಿಸಿ ಆಲೂ ಪಾಲಕ್ ಕಟ್ಲೆಟ್ ಸವಿಯಲು ಸಿದ್ಧ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ನಿಮ್ಮ ನೆಚ್ಚಿನ ಚಟ್ನಿ ಅಥವಾ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ
Advertisement