LatestMain PostNationalSports

ಅಂಡರ್ 19 ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ತಸ್ನೀಮ್ ಮೀರ್ ವಿಶ್ವದಲ್ಲೇ ನಂಬರ್ 1

ನವದೆಹಲಿ: 19 ವರ್ಷದೊಳಗಿನ ಸಿಂಗಲ್ಸ್ ಬ್ಯಾಡ್ಮಿಂಟನ್‌ನ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ತಸ್ನೀಮ್ ಮೀರ್ ಪಾತ್ರರಾಗಿದ್ದಾರೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(ಬಿಡಬ್ಲ್ಯುಎಫ್) ರ‍್ಯಾಂಕಿಂಗ್ ಪಟ್ಟಿಯಲ್ಲಿ ತಸ್ನೀಮ್ 10,810 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಗುಜರಾತ್ ಮೂಲದ ತಸ್ನೀಮ್ ತನ್ನ 6ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು. ಇಲ್ಲಿಯವರೆಗೆ ತಸ್ನೀಮ್ 4 ಅಂತರಾಷ್ಟ್ರೀಯ ಜೂನಿಯರ್ ಪಂದ್ಯಾವಳಿ ಸೇರಿದಂತೆ ಒಟ್ಟು 22 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದನ್ನೂ ಓದಿ: ಶಾಕಿಂಗ್‌ ಡಿಆರ್‌ಎಸ್‌ ವಿಡಿಯೋಗೆ ಕೊಹ್ಲಿ ಕಿಡಿ – ರಿವ್ಯೂ ಸಕ್ಸಸ್‌ ಎಂದು ವಾಹಿನಿಯಿಂದ ಸಮರ್ಥನೆ

ನಾನು ಇಂದು ತುಂಬಾ ಸಂತೋಷವಾಗಿದ್ದೇನೆ. ನನ್ನ ರೋಲ್ ಮಾಡೆಲ್ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಅವರ ಸಾಧನೆಯ ಹೆಜ್ಜೆಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇನೆ. ಕ್ರೀಡೆಯಲ್ಲಿ ಪಳಗಿದವರು ಹೇಗೆ ಆಡುತ್ತಾರೆ ಎಂಬುದನ್ನು ನಾನು ಗಮನಿಸುತ್ತಿದ್ದು, ಆ ಮಟ್ಟದಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಜಯಿಸುವುದು ನನ್ನ ಕನಸು ಎಂದು ಹೇಳಿದರು. ಇದನ್ನೂ ಓದಿ: ಶತಕ ಸಿಡಿಸಿ ಆಫ್ರಿಕಾಗೆ ಪಂಚ್ ನೀಡಿದ ಪಂತ್ – ಭಾರತದ ಗೆಲುವಿಗೆ ಬೇಕಿದೆ 8 ವಿಕೆಟ್

ಹಲವು ಬಾರಿ ಪಂದ್ಯದಲ್ಲಿ ಸೋತ ಬಳಿಕ ಅಳುತ್ತಿದ್ದೆ. ಇಂದು ಈ ಸ್ಥಾನಕ್ಕೆ ಬರಲು ನಾನು ಬಹಳಷ್ಟು ಶ್ರಮ ಪಟ್ಟಿದ್ದೇನೆ. ದಿನಕ್ಕೆ 6-7 ಗಂಟೆಗಳ ಕಾಲ ತರಬೇತಿ ಪಡೆಯುತ್ತಿದ್ದೇನೆ. ನನಗೆ ಹಾಗೂ ನನ್ನ ಸಹೋದರನಿಗೆ ಈ ಸಾಧನೆಯಲ್ಲಿ ಪೋಷಕರು ಬಹಳಷ್ಟು ತ್ಯಾಗ ಮಾಡಿದ್ದಾರೆ ಎನ್ನುತ್ತಾರೆ ತಸ್ನೀಮ್ ಮೀರ್.

Leave a Reply

Your email address will not be published. Required fields are marked *

Back to top button