ಆಗಸ್ಟ್ 10 ಮತ್ತು 11ನೇ ತಾರೀಖು ಬೆಂಗಳೂರಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tarun Sudhir) ಮತ್ತು ನಟಿ ಸೋನಲ್ (Sonal). 10ನೇ ತಾರೀಖು ಆರತಕ್ಷತೆ ಕಾರ್ಯಕ್ರಮವಿದ್ದರೆ 11ನೇ ತಾರೀಖು ಈ ಜೋಡಿ ಸಪ್ತಪದಿ ತುಳಿಯಲಿದೆ. ಮದುವೆ (Marriage) ಕುರಿತಾಗಿ ಮಾಧ್ಯಮಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಂಡಿದೆ ಈ ಜೋಡಿ.
Advertisement
ಲವ್ ಸ್ಟೋರಿಗೆ ದರ್ಶನ್ ಕಾರಣ
Advertisement
ಈ ಜೋಡಿಯ ಲವ್ ಸ್ಟೋರಿಗೆ ದರ್ಶನ್ ಕಾರಣವಂತೆ. ಈ ಕುರಿತಂತೆ ಮಾತನಾಡಿದ್ದಾರೆ ತರುಣ್. ‘ರಾಬರ್ಟ್ ಸೆಟ್ ನಲ್ಲಿ ದರ್ಶನ್ ಸರ್ ತಮಾಷೆಯಾಗಿ ರೇಗಿಸ್ತಿದ್ರು. ಸೋನಾಲ್ ಮದುವೆ ಮಾಡಿಕೊಳ್ತಿಯಾ ಅಂತ ರೇಗಿಸ್ತಿದ್ರು. ಸೋನಾಲ್ ಯಾವ ಸೆಟ್ ಗೆ ಹೋದ್ರೂ ಮದ್ವೆ ಬಗ್ಗೆ ಕೇಳ್ತಿದ್ರಂತೆ. ಸೋನಾಲ್ ಫೋನ್ ಮಾಡಿ ಅವತ್ತು ರೂಮರ್ಸ್ ಬಗ್ಗೆ ಹೇಳಿದ್ರು. 2023 ಜನವರಿಯಲ್ಲಿ ಮತ್ತಷ್ಟು ಕ್ಲೋಸ್ ಆಗ್ತಾ ಹೋದ್ವಿ. ಅವ್ರ ಪ್ರೂಚರ್, ಫ್ಯಾಮಿಲಿ ಬಗ್ಗೆ ನೋಡ್ತಾ ಬಂದ್ವಿ. ಕಾಟೇರ ರಿಲೀಸ್ ಆಗೋವರೆಗೂ ಮದುವೆಗೆ ಟೈಂ ಕೇಳಿದ್ದೆ. ಕಾಟೇರ ಸಿನಿಮಾ ರೆಸ್ಪಾನ್ಸ್ ಮೇಲೆ ನನ್ ಮದ್ವೆಗೆ ಡಿಸೈಡ್ ಮಾಡಿದ್ದು. ದರ್ಶನ್ ಸರ್ ಕೂಡಾ ಸೋನಲ್ ಮನೇಲಿ ಮಾತಾಡಿದ್ರು. ಫೈನಲಿ ಈಗ ಫ್ಯಾಮಿಲಿಯಲ್ಲಿ ಮಾತುಕತೆ ಮಾಡಿ ಮದುವೆಗೆ ನಿರ್ಧಾರ ಮಾಡಿದ್ವಿ’ ಅಂತಾರೆ.
Advertisement
Advertisement
ತಮಾಷೆನೇ ನಿಜಾ ಆಯ್ತು..
ಲವ್ ಮತ್ತು ಮದುವೆ ಕುರಿತಂತೆ ಮಾತಾಡಿದ ಸೋನಲ್ ಮಂಥೆರೋ ‘ನಾವು ಟಚ್ ಅಲ್ಲಿ ಇರ್ತಿರಲಿಲ್ಲ. ರಾಬರ್ಟ್ ಸಿನಿಮಾ ಟೈಮ್ ನಲ್ಲಿ ದರ್ಶನ್ ಸರ್ ತಮಾಷೆ ಮಾಡ್ತಿದ್ರು. ರೀಸೆಂಟ್ ಆಗಿ ಎಲ್ರು ಹೇಳೋದನ್ನ ಒಮ್ಮೆ ಥಿಂಕ್ ಮಾಡೋಣ ಅಂತ ಟ್ರೈ ಮಾಡಿದ್ವಿ. ನಾವು ನಮ್ಮ ಲವ್ ನ ಸೀಕ್ರೆಟ್ ಆಗಿ ಇಡೋದು ನನ್ನ ಡಿಸಿಷನ್ ಆಗಿತ್ತು. ಮದ್ವೆ ಆದ್ಮೇಲೂ ಸಿನಿಮಾ ನಿಲ್ಲಸಲ್ಲ ಮಾಡ್ತೀನಿ. ದರ್ಶನ್ ಸರ್ ನ ತರುಣ್ ಮೀಟ್ ಆಗಿದ್ದಾರೆ. ನನಗೆ ಅಲ್ಲಿಹೋಗೋಕೆ ಅವ್ರನ್ನ ಆತರ ನೋಡೋಕೆ ಇಷ್ಟ ಇಲ್ಲ. ಅವ್ರು ಅಷ್ಟರಲ್ಲಿ ಬರ್ತಾರೆ ಅನ್ನಿಸುತ್ತೆ ನೋಡೋಣ’ ಅಂತಾರೆ.
ದರ್ಶನ್ ಸರ್ ನ ಮಿಸ್ ಮಾಡ್ಕೋತೀವಿ ಅಂತಾರೆ ತರುಣ್ ಮತ್ತು ಸೋನಲ್. ದರ್ಶನ್ ಸರ್ ಎಲ್ಲಿದ್ರೂ ಅವ್ರ ವಿಶಸ್ ಇರುತ್ತೆ. ದರ್ಶನ್ ಸರ್ ಆಶೀರ್ವಾದ ಯಾವಾಗ್ಲೂ ಇರುತ್ತೆ. ನಮ್ ತಂದೆಯಷ್ಟೇ ದರ್ಶನ್ ಸರ್ ನ ಗೌರವಿಸ್ತೀನಿ. ಬಾಬಿಗೆ (ವಿಜಯಲಕ್ಷ್ಮಿ) ಇನ್ವಿಟೇಷನ್ ಕೊಟ್ಟಿದ್ದೀನಿ. ಅವ್ರು ಬರ್ತೀನಿ ಅಂದಿದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗ್ತೀವಿ. ಬೆಂಗಳೂರಿನಲ್ಲಿ ಮದುವೆ ನಂತರ ಮಂಗಳೂರಿನಲ್ಲೂ ಒಂದು ಫಂಕ್ಷನ್ ಮಾಡ್ತಾರಂತೆ ತರುಣ್ ಮತ್ತು ಸೋನಲ್.