ಚಿಕ್ಕಮಗಳೂರು: ಎರಡೂವರೆ ವರ್ಷಗಳ ಬಳಿಕ ನಡೆದ ಜಿಲ್ಲೆಯ ತರೀಕೆರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಬಿಜೆಪಿಗೆ ಮುಖಭಂಗವಾಗಿದೆ.
23 ವಾರ್ಡ್‍ಗಳ ತರೀಕೆರೆ ಪಟ್ಟಣದಲ್ಲಿ ಒಂದು ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ 22 ವಾರ್ಡ್‍ಗಳಿಗೆ ಇದೇ 3ರಂದು ಮತದಾನದ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಜಯಭೇರಿ ಭಾರಿಸಿದೆ. 23 ವಾರ್ಡ್‍ಗಳಲ್ಲಿ ಕಾಂಗ್ರೆಸ್ 15, ಪಕ್ಷೇತರರು 7 ಹಾಗೂ ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಕಂಡಿದೆ. ಆಡಳಿತ ಪಕ್ಷ ಬಿಜೆಪಿ ಕೇವಲ ಒಂದು ಸ್ಥಾನದಲ್ಲಿ ಗೆದ್ದು ತೀವ್ರ ಮುಖಭಂಗ ಅನುಭವಿಸಿದೆ. 15 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರ ಮೇಲೆ ಹೆಚ್ಚಿನ ನಿಗಾ: ಆರಗ ಜ್ಞಾನೇಂದ್ರ
ಎಂಎಲ್‍ಎ ಎಲೆಕ್ಷನ್‍ಗೆ ದಿಕ್ಸೂಚಿಯೇ?:
ಖಂಡಿತಾ ಇಲ್ಲ ಅನ್ನೋದು ತರೀಕೆರೆ ಪುರಸಭಾ ವ್ಯಾಪ್ತಿಯ ಮತದಾರರ ಅಂತರಾಳ. ಯಾಕಂದರೆ, ಈ ಲೋಕಲ್ ಫೈಟ್ ಸ್ನೇಹ, ಸಂಬಂಧ, ವಿಶ್ವಾಸದ ಆಧಾರದ ಮೇಲೆ ನಡೆಯುವ ಚುನಾವಣೆ. ಇಲ್ಲಿ ಬಿಜೆಪಿಯವರು ಕಾಂಗ್ರೆಸ್‍ಗೆ ವೋಟ್ ಹಾಕಿರುತ್ತಾರೆ. ಕಾಂಗ್ರೆಸ್ಸಿಗರು ಬಿಜೆಪಿಗೆ ವೋಟ್ ಹಾಕಿರುತ್ತಾರೆ. ಕಾಂಗ್ರೆಸ್-ಬಿಜೆಪಿ ಇಬ್ಬರೂ ಪಕ್ಷೇತರರಿಗೆ ಮತ ನೀಡಿರುತ್ತಾರೆ. ಇಲ್ಲಿ ಪಕ್ಷದ ಚಿಹ್ನೆಯಡಿ ಎಲೆಕ್ಷನ್ ನಡೆದರೂ ಕೂಡ ಪಕ್ಷಕ್ಕಿಂತ ಸ್ನೇಹ, ಸಂಬಂಧ, ವಿಶ್ವಾಸ ದೊಡ್ಡದಿರುತ್ತದೆ. ಹಾಗಾಗಿ, ಈ ಎಲೆಕ್ಷನ್ ಮುಂದಿನ ಎಂಎಲ್‍ಎ ಚುನಾವಣೆಯ ದಿಕ್ಸೂಚಿಯೇ ಅಲ್ಲ ಎಂದು ಮತದಾರರೇ ವಿಶ್ಲೇಷಿಸಿದ್ದಾರೆ.
ಜಾತಿ ಆಧಾರದಲ್ಲಿ ನೋಡುವುದಾರರೆ ತರೀಕೆರೆ ಪಟ್ಟಣದಲ್ಲಿ ಕುರುಬ ಹಾಗೂ ಮುಸ್ಲಿಂ ಮತದಾರರು ಹೆಚ್ಚಿದ್ದಾರೆ. ಹಾಗಾಗಿ, ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದಿದೆ ಎಂದು ಮತದಾರರು ತಮ್ಮ ಅನುಭವ ಹಂಚಿಕೊಂಡಿದ್ದು, ಈ ಫಲಿತಾಂಶ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಆಗಲ್ಲ ಎಂದು ತರೀಕೆರೆ ಮತದಾರರೇ ಹೇಳಿದ್ದಾರೆ. ಇದನ್ನೂ ಓದಿ: ಬೌಲರ್‌ಗಳ ಭರ್ಜರಿ ಆಟ – ಭಾರತಕ್ಕೆ 157 ರನ್‍ಗಳ ಗೆಲುವು
ಪಟ್ಟಣದಲ್ಲಿ ಲಿಂಗಾಯಿತರ ಪ್ರಾಬಲ್ಯ ಕಡಿಮೆ ಇದ್ದು, ಕುರುಬ ಹಾಗೂ ಮುಸ್ಲಿಮರ ಪ್ರಾಬಲ್ಯ ಹೆಚ್ಚಿಗಿರುವುದರಿಂದ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ತಾಲೂಕಿನಲ್ಲಿ ಲಿಂಗಾಯಿತರ ಪ್ರಾಬಲ್ಯ ಹೆಚ್ಚಿದ್ದು ಲಿಂಗಾಯಿತ ಸಮುದಾಯದ ಸುರೇಶ್ ಶಾಸಕರಾಗಿದ್ದಾರೆ. ಹಾಗಾಗಿ, ಈ ಚುನಾವಣೆ ಫಲಿತಾಂಶ ಎಂಎಲ್‍ಎ ಎಲೆಕ್ಷನ್ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ತರೀಕೆರೆ ಜನ ಅಭಿಪ್ರಾಯಪಟ್ಟಿದ್ದಾರೆ.
ತರೀಕೆರೆ ಪುರಸಭೆಯಲ್ಲಿ ಇತಿಹಾಸದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. 2002ರಲ್ಲಿ ಎರಡು ಸ್ಥಾನ ಗೆದ್ದದ್ದು ಹೊರತುಪಡಿಸಿದರೆ, 2013ರಲ್ಲಿ ಶಾಸಕ ಸುರೇಶ್ ಕೆಜೆಪಿ ಸೇರಿದ ಬಳಿಕ ಎರಡು ಸ್ಥಾನ ಕೆಜೆಪಿ ಯಿಂದ ಗೆದ್ದಿತ್ತು. ಉಳಿದಂತೆ ಈ ಬಾರಿ ಒಂದು ಸ್ಥಾನದಲ್ಲಿ ಗೆದ್ದಿದೆ. ಹಾಗಾಗಿ, ಈ ಫಲಿತಾಂಶ ಕೇವಲ ಪುರಸಭೆಗಷ್ಟೇ ಮೀಸಲು ಹೊರತು ಎಂಎಲ್‍ಎ ಎಲೆಕ್ಷನ್‍ಗೆ ಅಲ್ಲ ಅನ್ನೋದು ಸ್ಥಳಿಯರ ಅಭಿಪ್ರಾಯ. ಇದನ್ನೂ ಓದಿ: ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿಕೆಶಿ