ಸ್ಯಾಂಡಲ್‌ವುಡ್ ನಟಿ ತಾರಾ (Thara Anooradha) ಇದೀಗ ಅಭಿಮಾನಿಗಳು ಖುಷಿಪಡುವ ಸುದ್ದಿ ನೀಡಿದ್ದಾರೆ. ಕಂಡ ಕನಸಿನಂತೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಾರಾ ಮನೆಯ ಗೃಹಪ್ರವೇಶದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಮತ್ತು ಕಿರುತೆರೆಯ ‘ರಾಜ ರಾಣಿ’ (Raja Rani) ಶೋಗೆ ಜಡ್ಜ್ ಆಗಿ ತಾರಾ ಬ್ಯುಸಿಯಾಗಿದ್ದಾರೆ. ಹೊಸ ಮನೆಗೆ ಗೃಹಪ್ರವೇಶ ಸಮಾರಂಭವನ್ನು ಅದ್ಧೂರಿಯಾಗಿ ನಡೆದಿದೆ. ಇದೀಗ ತಾರಾ ಮನೆಗೆ ಸೃಜನ್ ಲೋಕೇಶ್, ಅನುಪಮಾ ಗೌಡ (Anupama Gowda), ನೇಹಾ (Neha Gowda), ಇಶಿತಾ ದಂಪತಿ ಭಾಗಿಯಾಗಿ ಶುಭಕೋರಿದ್ದಾರೆ.
ಅದಷ್ಟೇ ಅಲ್ಲ, ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿಗಳು, ರಾಜ ರಾಣಿ ಕಾರ್ಯಕ್ರಮದ ಸ್ಪರ್ಧಿಗಳು ಭಾಗಿಯಾಗುವ ಸಂಭ್ರಮ ಡಬಲ್ ಮಾಡಿದ್ದಾರೆ. ಇದನ್ನೂ ಓದಿ:ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ
ಅಂದಹಾಗೆ, ಇತ್ತೀಚೆಗೆ ‘ಕೋಟಿ’ (Kotee Film) ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ಹಿರಿಯ ನಟಿ ತಾರಾ (Thara Anooradha) ನಟಿಸಿದ್ದರು. ತಾಯಿ ಮಗನ ಕಾಂಬಿನೇಷನ್ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.