ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

Public TV
2 Min Read
tanya hope 3

ತೆಲುಗು ಸಿನಿಮಾ ರಂಗದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ದ ತಾನ್ಯ ಹೋಪ್, ಯಜಮಾನ ಚಿತ್ರದಿಂದ ಕನ್ನಡಿಗರ ಮನೆಮಾತಾದರು. ಅದರಲ್ಲೂ ‘ಬಸಣ್ಣಿ ಬಾ’ ಹಾಡು ಅವರನ್ನು ಮತ್ತೊಂದು ಮಟ್ಟಕ್ಕೆ ಕರೆದುಕೊಂಡು ಹೋಯಿತು. ಆನಂತರ ತಾನ್ಯ ಸಿನಿಮಾ ರಂಗದಲ್ಲಿ ಬ್ಯುಸಿಯಾದರು. ಈಗ ಬ್ಯಾಕ್ ಟು ಬ್ಯಾಕ್ ತಮಿಳು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಕುಲಸಾಮಿ ಸಿನಿಮಾದ ನಂತರ ಇದೀಗ ಕನ್ನಡದ ಚಿತ್ರ ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ತಮಿಳು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ ಕೊನೆ ವಾರದಿಂದ ಶೂಟಿಂಗ್ ನಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

tanya hope 4

ಸಿನಿಮಾ ತಮಿಳದ್ದಾದರೂ, ಬಹುತೇಕ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆ ಪ್ರಶಾಂತ್ ರಾಜ್ ಹೇಳಿದ್ದರು. ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡುವೆ ಎಂದೂ ತಿಳಿಸಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕನ್ನಡದ ನಟಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

FotoJet 43

“ನಾನು ಈವರೆಗೂ ಏನು ಹೇಳಿದ್ದೇನೋ ಹಾಗೆಯೇ ನಡೆದುಕೊಂಡಿದ್ದೇನೆ. ತಮಿಳು ಸಿನಿಮಾ ಮಾಡುತ್ತಿದ್ದರೂ, ಕನ್ನಡದ ನಾಯಕಿಯೇ ನನ್ನ ಸಿನಿಮಾದಲ್ಲಿ ಇರಲಿದ್ದಾರೆ ಎಂದಿದ್ದೆ. ಮಾತಿನಂತೆ ನಡೆದುಕೊಂಡಿದ್ದೇನೆ. ತಾನ್ಯ ಒಂದೊಳ್ಳೆ ಮಹತ್ವದ ಪಾತ್ರವನ್ನೇ ನಿರ್ವಹಿಸಲಿದ್ದಾರೆ. ನಗಿಸುತ್ತಲೇ ಹೊಸ ವಿಷಯವನ್ನು ಹೇಳುವ ಪ್ರಯತ್ನ ಈ ಸಿನಿಮಾದಲ್ಲಿ ಆಗಲಿದೆ” ಎನ್ನುತ್ತಾರೆ ಪ್ರಶಾಂತ್ ರಾಜ್. ಇದನ್ನೂ ಓದಿ : ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

tanya hope 2

ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲಿ ನಾಯಕನಷ್ಟೇ ನಾಯಕಿಗೂ ಮಹತ್ವ ಇರುತ್ತದೆ. ಹಾಗಾಗಿಯೇ ಇವರ ಚಿತ್ರದ ನಟನೆಗಾಗಿ ರಾಧಿಕಾ ಪಂಡಿತ್ ಸೇರಿದಂತೆ ಹಲವು ನಟಿಯರು ಅತ್ಯುತಮ ನಟಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ತಾನ್ಯಗೂ ಅಂಥದ್ದೇ ಮಹತ್ವದ ಪಾತ್ರವನ್ನು ನೀಡಿದ್ದಾರಂತೆ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

tanya hope 1

ಅಂದಹಾಗೆ ತಮಿಳಿನ ನಟ ಸಂತಾನಂ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಕನ್ನಡದ ಹಾಸ್ಯನಟ ಸಾಧು ಕೋಕಿಲಾ ಸೇರಿದಂತೆ ಅನುಭವಿ ತಾರಾ ಬಳಗವೇ ಸಿನಿಮಾದಲ್ಲಿ ಇರಲಿದೆ.

Share This Article
Leave a Comment

Leave a Reply

Your email address will not be published. Required fields are marked *