ತರುಣ್ ಶಿವಪ್ಪ ಸಿನಿಮಾದಲ್ಲಿ ತಾನ್ಯ ಹೋಪ್

Public TV
1 Min Read
tanya hope

-ಚಿರಂಜೀವಿ ಸರ್ಜಾಗೆ ಜೊತೆಯಾಗಿ ತಾನ್ಯ ಮಿಂಚಿಂಗ್

ಬೆಂಗಳೂರು: ಚಂದನವನದ ಚೆಂದದ ಚೆಲುವೆ ತಾನ್ಯ ಹೋಪ್ ನಟಿಸಿದ್ದ ಯಜಮಾನ ಕಳೆದ ವಾರ ಬಿಡುಗಡೆಯಾಗಿದೆ. ಕೈಯಲ್ಲಿ ಮೂರು ಚಿತ್ರಗಳನ್ನು ಹೊಂದಿರುವ ತಾನ್ಯ ಹೋಪ್ ಸ್ಯಾಂಡಲ್‍ವುಡ್ ನ ಬೇಡಿಕೆಯ ನಟಿಯಾಗಿದ್ದಾರೆ.

ಚಿರಂಜೀವಿ ಸರ್ಜಾ ನಟಿಸುತ್ತಿರುವ ‘ಖಾಕಿ-ದ ಪವರ್ ಆಫ್ ಕಾಮನ್ ಮ್ಯಾನ್’ ಚಿತ್ರದಲ್ಲಿ ತಾನ್ಯ ಹೋಪ್ ನಟಿಸೋದು ಪಕ್ಕಾ ಆಗಿದೆ. ನವೀನ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಲಿದ್ದು, ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ. ನವೀನ್ ರೆಡ್ಡಿ `ಖಾಕಿ’ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಹಿಂದೆ ತರುಣ್ ಶಿವಪ್ಪ ನಿರ್ಮಾಣದ ‘ಮಾಸ್ ಲೀಡರ್’ ಮತ್ತು ‘ರೋಜ್’ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವನ್ನು ನವೀನ್ ರೆಡ್ಡಿ ಹೊಂದಿದ್ದಾರೆ.

tanya hope a

ಮಾಸ್ ಮತ್ತು ಎಂಟರ್‍ಟೈನರ್ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಕೊನೆಗೆ ಯುವ ಸಮುದಾಯಕ್ಕೆ ಸಂದೇಶವನನ್ನು ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ. ಮುಂದಿನ ತಿಂಗಳನಿಂದ ಹೈದರಾಬಾದ್ ನಲ್ಲಿ ಮೂವತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ತಾನ್ಯ ನಾಯಕನಿಗೆ ಜೊತೆಯಾಗಿ ಕಾಣಸಿಕೊಳ್ಳವ ಬಬ್ಲಿ ಗರ್ಲ್ ಪಾತ್ರದಲ್ಲಿ ಮಿಂಚಲಿದ್ದಾರೆ.

ತಮಿಳಿನ “ನ್ಯೂ’ ಚಿತ್ರ ನಿರ್ದೇಶಕ ವಿದ್ಯಾದರ್ ಕಥೆ ಬರೆದಿದ್ದು, ಬಾಲು ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಮೊದಲು ಸ್ಟಂಟ್ ಮಾಸ್ಟರ್ ಪೀಟರ್ ಹೇನ್ಸ್ ನಿರ್ದೇಶನದ ಹಾಲಿವುಡ್ ಚಿತ್ರಕ್ಕೆ ಕ್ಯಾಮೆರಾ ವಿಭಾಗದಲ್ಲಿ ಬಾಲು ಕೆಲಸ ಮಾಡಿದ್ದವರು. ‘ಸಂಕಷ್ಟಕರ ಗಣಪತಿ’ಯ ಋತ್ವಿಕ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *