ಮೈಸೂರು: ಅವರಿಗೊಂದು ದೇಶ, ಇವರಿಗೊಂದು ದೇಶ ಎಂದು ಎತ್ತಿಕೊಡಲು ದೇಶ ನಿಮ್ಮ ತಾತನದ್ದಾ?. ಭಾರತ ನಮ್ಮದು, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ನೀವು ಹಿಜಬ್ ಬೇಡ ಎಂದರೆ, ನಾವು ಕುಂಕುಮ ಬೇಡ, ಹೂ ಬೇಡ ಎಂದು ಹೇಳಿದರೆ ಪರಿಸ್ಥಿತಿ ಏನಾಗುತ್ತದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್, ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Advertisement
ಹಿಜಬ್-ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಈ ಹೇಳಿಕೆ ತಿರುಗೇಟು ನೀಡಿದ ತನ್ವೀರ್ ಸೇಠ್, ನಾಮ್ಮನ್ನು ಈ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಎಂದು ಹೇಳುವುದಕ್ಕೆ ನೀವು ಯಾರು?. ಬೇರೆ ದೇಶಕ್ಕೆ ಹೋಗಿ ಎಂದು ವೀಸಾ ಕೊಡೋಕೆ ನಿಮಗೆ ಯಾವ ಹಕ್ಕಿದೆ? ಎಲ್ಲವನ್ನೂ ಕೇವಲ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡಬೇಡಿ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ವಿಚಾರಗಳ ಬಗ್ಗೆ ಮಾತನಾಡಿ. ಈ ದೇಶ ಮಾನವೀಯ ಧರ್ಮದ ಆಧಾರದ ಮೇಲೆ ಕಟ್ಟಲಾಗಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ
Advertisement
Advertisement
ಹಿಜಬ್ ವಿವಾದ ವಿಚಾರವಾಗಿ ಮಾತನಾಡಿ, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ. ಕಡ್ಡಾಯ ಮಾಡಿದರೆ, ನಿಯಮವನ್ನು ಪಾಲಿಸಬೇಕು. ಆದರೆ ಇದೀಗ ಹಿಜಬ್ ವಿಚಾರವಾಗಿ ಅನಗತ್ಯ ವಿವಾದವಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಈ ಸೂಕ್ಷ್ಮ ವಿಚಾರವನ್ನು ವಿವಾದ ಮಾಡಲಾಗುತ್ತಿದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತ ವರ್ತನೆಗಳು ಈಗ ಕಂಡುಬರುತ್ತಿದೆ. ಸರ್ಕಾರ ತಕ್ಷಣ ಈ ವಿಚಾರದ ಬಗ್ಗೆ ಚರ್ಚೆಗೆ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ ತೀರ್ಮಾನವಾಗಲಿ. ಇದನ್ನು ಹೊರತುಪಡಿಸಿ ಮಕ್ಕಳಲ್ಲಿ ವಿಷ ಬೀಜ ತುಂಬುವ ಕೆಲಸ ಮಾಡಬೇಡಿ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ
Advertisement