ಬೆಂಗಳೂರು: ಚೀನಾ ನ್ಯೂ ಇಯರ್ ಆಚರಣೆಗೆ ಮುಂದಾಗಿದ್ದು ತಪ್ಪಲ್ಲ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳುವ ಮೂಲಕ ನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಚೀನಾ ದೇಶದ ನ್ಯೂ ಇಯರ್ ಆಚರಣೆ ಮಾಡುವುದು ತಪ್ಪಲ್ಲ. ಅದು ದೇಶ ವಿರೋಧಿ ನಡೆ ಅಲ್ಲ. ದೇಶಗಳು ಯಾವ ರೀತಿ ನ್ಯೂ ಇಯರ್ ಆಚರಿಸುತ್ತವೆ ಅನ್ನೋದು ತೋರಿಸೊ ಉದ್ದೇಶ ಅಷ್ಟೆ ಅಂತ ಅವರು ಹೇಳಿಕೆ ನೀಡಿದ್ದರು.
Advertisement
ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನಿಡಲು ಸಚಿವರು ಹಿಂದೇಟು ಹಾಕುತ್ತಿದ್ದು, ಇದರಲ್ಲಿ ಶಾಲೆಯದ್ದು ಏನೂ ತಪ್ಪಿಲ್ಲ ಅನ್ನೊ ಶಾಲೆಯ ಹೇಳಿಕೆಯನ್ನ ಪ್ರತಿಕ್ರಿಯೆ ರೂಪದಲ್ಲಿ ಕಳುಹಿಸಿದ್ದಾರೆ.
Advertisement
ಶುಕ್ರವಾರ ಚೀನಾ ನ್ಯೂ ಇಯರ್ ಸೆಲೆಬ್ರೇಷನ್‍ಗಾಗಿ ಮಕ್ಕಳಿಗೆ ಚೀನಾ ಡ್ರೆಸ್ ಹಾಕಿಕೊಂಡು ಬರಬೇಕು. ಅಷ್ಟೇ ಅಲ್ಲದೇ ಊಟಕ್ಕೆ ನೂಡಲ್ಸ್, ಫ್ರೈಡ್ ರೈಸ್, ಮಂಚೂರಿಯಂತಹ ಚೈನೀಸ್ ಫುಡ್ ತರಬೇಕು ಎಂದು ಆಗಸ್ಟ್ 3ನೇ ತಾರೀಕಿನಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ಸುತ್ತೋಲೆ ಹೊರಡಿಸಿತ್ತು.
Advertisement
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಉತ್ತರ ವಲಯ 4 ಬಿಇಓ ನಾರಾಯಣ, ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ನಾಳಿನ ಚೀನಾ ನ್ಯೂ ಇಯರ್ ಕ್ರಾರ್ಯಕ್ರಮವನ್ನ ರದ್ದು ಮಾಡಿಸ್ತೀವಿ. ಕಾರ್ಯಕ್ರಮ ನಡೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ಗೊತ್ತಾಗಿದೆ. ಶಾಲೆ ಹೊರಡಿಸಿರುವ ಸುತ್ತೋಲೆ ಗಮನಿಸಿದ್ದೇನೆ. ಕೂಡಲೇ ಕಾರ್ಯಕ್ರಮವನ್ನು ರದ್ದು ಮಾಡಿಸ್ತೀನಿ ಅಂತ ಹೇಳಿದ್ದರು.