-ಟ್ಯಾಂಕರ್ ಪಲ್ಟಿ ನೋಡಲು ಹೋದ ವ್ಯಕ್ತಿ ಅಪಘಾತದಲ್ಲಿ ದುರ್ಮರಣ
ಹಾಸನ: ಶಿರಾಡಿ ಸಂಚಾರಕ್ಕೆ ಮತ್ತೊಂದು ಅಡ್ಡಿಯಾಗಿದ್ದು, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಅನಿಲ ಟ್ಯಾಂಕರ್ ಪಲ್ಟಿಯಾಗಿದೆ. ಟ್ಯಾಂಕರ್ ಪಲ್ಟಿ ನೋಡಲು ಹೋದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗುಡ್ಡ ಕುಸಿತದಿಂದ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಅನಿಲ ಸೋರಿಕೆಯಿಂದ ವಾಹನ ಸಂಚಾರಕ್ಕೆ ಮತ್ತೆ ಅಡಚಣೆಯಾಗಿದೆ. ಅಲ್ಲದೇ ಶಿರಾಢಿಘಾಟ್ ಮಾರ್ಗದ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಮಂಗಳೂರು ಕಡೆಯಿಂದ ಬಂದ ವಾಹನ ಸವಾರರಿಗೆ ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು.
ಸದ್ಯ ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ ಟ್ಯಾಂಕರ್ ಪಲ್ಟಿ ನೋಡಲು ಹೋದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಗಳೂರು ಮೂಲದ ರಾಮದೇವ್ ಮೃತ ವ್ಯಕ್ತಿಯಾಗಿದ್ದು, ಮಗುಚಿದ್ದ ಟ್ಯಾಂಕರ್ ನೋಡಲು ತೆರಳಿದ್ದಾಗ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಟ್ಯಾಂಕರ್ ನಿಂದ ಅನಿಲ ಸೋರಿಕೆ ತಡೆಗಟ್ಟಲು ಹರಸಾಹಸಪಡುತ್ತಿದ್ದಾರೆ. ತೈಲ ಕಂಪೆನಿ ಸಿಬ್ಬಂದಿ ಮಂಗಳೂರಿನಿಂದ ಆಗಮಿಸಿತ್ತು. ಸದ್ಯ ಈಗ ಚಾರ್ಮಾಡಿ ಘಾಟ್ ಮೂಲಕ ವಾಹನ ಚಲಿಸಲು ಅವಕಾಶ ನೀಡಲಾಗಿದೆ.
ಸದ್ಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಹೇಮಾವತಿ ಜಲಾಶಯಕ್ಕೆ 42607 ಕ್ಯೂಸೆಕ್ ಒಳ ಹರಿವು ಇದ್ದು, 49750 ಕ್ಯೂಸೆಕ್ ಹೊರ ಹರಿವು ಇದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv