ಟೆಹ್ರಾನ್/ಬೀಜಿಂಗ್: ಇರಾನಿನ ಕಚ್ಚಾ ತೈಲ (Iranian Crude Oil) ಹೊತ್ತು ಭಾರತದತ್ತ ಹೊರಟಿದ್ದ ಟ್ಯಾಂಕರ್ ಏಕಾಏಕಿ ಮಾರ್ಗ ಬದಲಾಯಿಸಿ ಚೀನಾ (China) ಕಡೆಗೆ ಹೊರಟಿದೆ ಎಂದು ವರದಿಯಾಗಿದೆ.
2022 ರಲ್ಲಿ ನಿರ್ಮಿಸಿದ ಹಾಗೂ ಯುಎಸ್ (USA) ಅನುಮೋದಿಸಿದ ಅಫ್ರಾಮ್ಯಾಕ್ಸ್ ಟ್ಯಾಂಕರ್ ಪಿಂಗ್ ಶುನ್ (Ping Shun), ಭಾರತದಿಂದ ಮಾರ್ಗ ಬದಲಾಯಿಸಿ ಚೀನಾದ ಕಡೆಗೆ ಹೊರಟಿದೆ ಎಂದು ಕೆಪ್ಲರ್ ಹಡಗು ಟ್ರ್ಯಾಕಿಂಗ್ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: LPG ಸಿಲಿಂಡರ್ ವದಂತಿಗೆ ಕೇಂದ್ರ ಕಡಿವಾಣ – ಪ್ರತಿನಿತ್ಯ ಮಾಹಿತಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಸಲಹೆ

ಇರಾನ್‌ನ ಕಚ್ಚಾ ತೈಲ ಹೊತ್ತಿದ್ದ ದಕ್ಷಿಣ ಆಫ್ರಿಕಾದ ಈಸ್ವತಿನಿ ದೇಶದ ಧ್ವಜ ಇರುವ ಟ್ಯಾಂಕರ್ ಈ ವಾರದ ಆರಂಭದಲ್ಲಿ ಗುಜರಾತ್‌ನ ವಾಡಿನಾರ್ ಬಂದರಿಗೆ ಬರುವ ನಿರೀಕ್ಷೆ ಇತ್ತು. ಟ್ರಾನ್ಸ್‌ಪಾಂಡರ್‌ಗಳು ಮತ್ತು AIS (ಸ್ವಯಂಚಾಲಿತ ಗುರುತಿನ ವ್ಯವಸ್ಥೆ) ವ್ಯವಸ್ಥೆಯನ್ನೂ ಈ ಹಡಗು ಹೊಂದಿದೆ. ಆದ್ರೆ ಏಕಾಏಕಿ ಮಾರ್ಗ ಬದಲಾಯಿಸಿದೆ. ಹಡಗು ಇನ್ನೂ ಗೊತ್ತುಪಡಿಸಿದ ಸ್ಥಳ ತಲುಪಿಲ್ಲ, ಟ್ರ್ಯಾಕಿಂಗ್ ದತ್ತಾಂಶ (Tracking data) ಕೂಡ ಅಂತಿಮಗೊಂಡಿಲ್ಲ. ಸದ್ಯ ಚೀನಾದತ್ತ ಹೊರಡುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆ ಮಾಹಿತಿ ನೀಡಿದೆ.
ಚೀನಾದತ್ತ ಮಾರ್ಗ ಬದಲಿಸಲು ಕಾರಣ ಏನು?
ಗುಜರಾತ್‌ನ ವಾಡಿನಾರ್ ಬಂದರಿಗೆ ಬರಬೇಕಿದ್ದ ಕಚ್ಚಾ ತೈಲ ಟ್ಯಾಂಕರ್, ಚೀನಾದತ್ತ ಹೊರಡಲು ಕಾರಣ ಕೂಡ ಇದೆ. ಶಿಷ್ಟಾಚಾರದ ಅನ್ವಯ ಅಂತಾರಾಷ್ಟ್ರೀಯ ಬಂದರುಗಳಲ್ಲಿ ದಾಖಲೆಗಳನ್ನೂ ಪೂರ್ಣಗೊಳಿಸುವ ಅಗತ್ಯವಿದೆ. ಆದ್ರೆ ಟ್ಯಾಂಕರ್ ಪಿಂಗ್ ಶುನ್ ಟ್ಯಾಂಕರ್‌ನ ಬೆಲೆ, ವಿಮೆ, ಕಾರ್ಯಾಚರಣೆ ಸಿಬ್ಬಂದಿ ಹಾಗೂ ಇತರ ದಾಖಲಾತಿಗಳಲ್ಲಿ ಸಮಸ್ಯೆಗಳಿದ್ದವು, ಹಾಗಾಗಿ ಅಂತಿಮ ಹಂತದಲ್ಲಿ ಮಾರ್ಗ ಬದಲಾವಣೆ ಮಾಡಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ ಹಡಗು ಗೊತ್ತುಪಡಿಸಿದ ಸ್ಥಳ ಬದಲಾಯಿಸಲು ಇದೇ ನಿಖರ ಕಾರಣ ಇರಬಹುದು ಅನ್ನೋದು ತಿಳಿದಿಲ್ಲ ಅಂತ ತಿಳಿಸಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: Electric Car Market| ಫಸ್ಟ್ ಟೈಂ ಎಂಜಿ ಹಿಂದಿಕ್ಕಿದ ಮಹೀಂದ್ರಾ – ಟಾಟಾ ಮೋಟಾರ್ಸ್‌ಗೆ ಅಗ್ರಸ್ಥಾನ

