ಬಿಗ್ ಬಾಸ್ ಮನೆಯಲ್ಲಿ (Bigg Boss House 10) ಪ್ರತಿ ಬಾರಿಯಂತೆ ಈ ಸಲ ಕೂಡ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ. ಅದರಲ್ಲಿ ಸಂಗೀತಾ- ಕಾರ್ತಿಕ್ ಒಡನಾಟ ಹೈಲೆಟ್ ಆಗಿದೆ. ಇದೀಗ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಕಾರ್ತಿಕ್‌ಗೆ ಕಿವಿಮಾತೊಂದನ್ನ ತನಿಷಾ ಹೇಳಿದ್ದಾರೆ. ಕಾರ್ತಿಕ್‌ಗೆ ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ, ವ್ಯರ್ಥ ಪ್ರಯತ್ನ ಅಂತ ತನಿಷಾ ಎಚ್ಚರಿಕೆ ನೀಡಿದ್ದಾರೆ.
ವೀಕೆಂಡ್ ಮಾತುಕತೆಯಲ್ಲಿ ಸುದೀಪ್, ಸಹಸ್ಪರ್ಧಿಗೆ ಬಲೂನ್ ಹೊಡೆದು ತಮ್ಮ ಅನಿಸಿಕೆಯನ್ನ ಹೇಳುವ ಅವಕಾಶ ಪ್ರತಿಯೊಬ್ಬರಿಗೂ ನೀಡಿದ್ದರು. ಆಗ ಎಲ್ಲರಂತೆ ತನಿಷಾ (Tanisha) ಕೂಡ, ಕಾರ್ತಿಕ್ (Karthik Mahesh) ಕುರಿತು ಮಾತನಾಡಿದ್ದಾರೆ. ನಿನ್ನ ನಿರ್ಧಾರಗಳೆಲ್ಲವೂ ಯಾವಾಗಲೂ ಸರಿ ಅಂದುಕೊಳ್ಳುತ್ತಿಯಾ ಆದರೆ ಅದು ಸುಳ್ಳು ಎಂದು ಬಲೂನ್ ಬ್ಲ್ಯಾಸ್ಟ್ ಮಾಡಿದ್ದಾರೆ. ಬಳಿಕ ನಮ್ಮ ಹುಡುಗಿ ಸಂಗೀತಾ ನಿನ್ನ ಲವ್‌ನಲ್ಲಿ ಬೀಳಲ್ಲ. ಅದು ನಿಮ್ಮ ಪ್ರಯತ್ನ ವ್ಯರ್ಥ ಎಂದಿದ್ದಾರೆ. ಇದನ್ನೂ ಓದಿ:ಒಟಿಟಿಗೆ ಬಂತು ‘ಲಿಯೋ’: ಹೊಸ ಸಿನಿಮಾದಲ್ಲಿ ವಿಜಯ್ ಬ್ಯೂಸಿ
ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಪರಿಚಯವಾದ ಸಹೋದರಿಯರ ಜೊತೆ ಡ್ರೋನ್ ಪ್ರತಾಪ್ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಂಗೀತಾ (Sangeetha Sringeri) ಜೊತೆಗಿನ ಪ್ರತಾಪ್ ಡ್ಯಾನ್ಸ್ ನೋಡಿ ಕಾರ್ತಿಕ್ ನೋಟ ಬೇರೇ ತರಹನೇ ಇತ್ತು. ಶಾಕ್ ಆಗಿ ಇಬ್ಬರೂ ಡ್ಯಾನ್ಸ್ ನೋಡುತ್ತಿದ್ದರು. ಕಾರ್ತಿಕ್ ನಡೆಗೆ ಸುದೀಪ್ ಸೇರಿದಂತೆ ಸಹಸ್ಪರ್ಧಿಗಳು ಕೂಡ ಕಾಲೆಳೆದಿದ್ದಾರೆ.
ಬಿಗ್ ಮನೆಗೆ ಕಾಲಿಟ್ಟ ಕೆಲವೇ ದಿನಕ್ಕೆ ಇಶಾನಿ ನನ್ನ ಗರ್ಲ್‌ಫ್ರೆಂಡ್ ಎಂದು ಮೈಕಲ್ ಘೋಷಿಸಿದ್ದರು. ಸಂಗೀತಾ-ಕಾರ್ತಿಕ್ ನಡುವೆ ಗೆಳೆತನವಿದೆ. ಆದರೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದ್ಯಾ? ಮುಂದಿನ ದಿನಗಳಲ್ಲಿ ಮೈಕಲ್ ಅವರಂತೆಯೇ ಬ್ರೇಕಿಂಗ್ ನ್ಯೂಸ್ ಕೊಡುತ್ತಾರಾ ಕಾಯಬೇಕಿದೆ.