ಪೊಲೀಸ್ ಪಾತ್ರಕ್ಕೆ ನಟಿ ಮಾಲಾಶ್ರೀ ಸ್ಫೂರ್ತಿ ಎಂದ ತನಿಷಾ ಕುಪ್ಪಂಡ

Public TV
1 Min Read
tanisha 1 1

ಟಿ, ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ದೊಡ್ಮನೆ ಆಟ ಮುಗಿದ ಮೇಲೆ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೋಟೆಲ್ ಬ್ಯುಸಿನೆಸ್ ಜೊತೆಗೆ ಮೊನ್ನೆಯಷ್ಟೇ ಜ್ಯುವೆಲರಿ ಶಾಪ್ ಕೂಡ ಶುರು ಮಾಡಿದ್ದಾರೆ. ಈ ನಡುವೆ ಶೇರ್ ಹೆಸರಿನ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಎತ್ತಿದ್ದಾರೆ. ಈ ಪಾತ್ರಕ್ಕೆ ನಟಿ ಮಾಲಾಶ್ರೀ (Malashree) ಅವರು ಸ್ಪೂರ್ತಿ ಎಂದು ತನಿಷಾ ಕುಪ್ಪಂಡ ಮಾತನಾಡಿದ್ದಾರೆ.

tanisha kuppanda

ತನಿಷಾ ಕುಪ್ಪಂಡ ಖಡಕ್ ಮಾತುಗಳ ಮೂಲಕ ಗಮನ ಸೆಳೆದ ನಟಿ. ಬಿಗ್ ಬಾಸ್ ಮನೆಯ ಬೆಂಕಿ ಎಂದೇ ಹೈಲೆಟ್ ಆಗಿರೋ ತನಿಷಾ ಕಾಕಿ ತೊಟ್ಟು ದುಷ್ಟರಿಗೆ ಕ್ಲ್ಯಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ.

Tanisha Kuppanda 5

ಕನ್ನಡತಿ ಹೀರೋ ಕಿರಣ್ ರಾಜ್ (Kiran Raj) ನಟನೆಯ ‘ಶೇರ್’ (Sherr) ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟಿಯೇ ಸ್ವತಃ ಅಪ್‌ಡೇಟ್ ನೀಡಿದ್ದಾರೆ. ನಟಿಯ ಖದರ್ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ನಿಮ್ಮ ಗೆಟಪ್ ಬೆಂಕಿ ಎಂದು ತನಿಷಾಗೆ ಮೆಚ್ಚುಗೆ ಸೂಚಿಸಿದ್ದಾರೆ.

 

ನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆ ಎಂದು ನಟಿ ಅಡಿಬರಹ ನೀಡಿದ್ದಾರೆ. ಪೊಲೀಸ್ ಅವತಾರದಲ್ಲಿರುವ ವಿವಿಧ ಭಂಗಿಯ ಫೋಟೋ ಶೇರ್ ಮಾಡಿದ್ದಾರೆ.

Share This Article