‘ಬೆಂಕಿ’ ಸಾಂಗ್ ಕೇಳಿ ಸಂಭ್ರಮಿಸಿದ ತನಿಷಾ ಕುಪ್ಪಂಡ

Public TV
1 Min Read
Tanisha Kuppanda

ಬಿಗ್ ಬಾಸ್ (Big Boss Kannada) ಮನೆಯಿಂದ ಕಣ್ಣೀರು ಹಾಕುತ್ತಲೇ ಹೊರ ಬಂದ ನಟಿ ತನಿಷಾ ಕುಪ್ಪಂಡ, ಇದೀಗ ತನ್ನ ಬಗ್ಗೆ ಮೂಡಿ ಬಂದಿರುವ ಬೆಂಕಿ (Benki) ಸಾಂಗ್ ಕೇಳಿ ಸಂಭ್ರಮಿಸುತ್ತಿದ್ದಾರೆ. ಸಾಂಗ್ ನೋಡಿದ ಬಳಿಕ ವಿಡಿಯೋವೊಂದನ್ನು ಮಾಡಿರುವ ಅವರು, ತುಂಬಾ ನೋವಿನಿಂದಲೇ ನಾನು ಬಿಗ್ ಬಾಸ್ ಮನೆಯಿಂದ ಆಚೆ ಬಂದೆ. ಆದರೆ, ನನ್ನ ಬಗ್ಗೆ ಸಾಂಗ್ ಮಾಡಿದ್ದು ಕೇಳಿ ತುಂಬಾನೇ ಖುಷಿ ಆಗುತ್ತಿದೆ. ನನಗೂ ಫ್ಯಾನ್ಸ್ ಇದ್ದಾರೆ ಎಂದು ನೋಡಿ ಸಂತಸವಾಯಿತು ಎಂದಿದ್ದಾರೆ.

tanisha kuppanda 1

ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಆಟವಾಡಿದ್ದರು ತನಿಷಾ. ಅವರ ಆಟಕ್ಕೆ ಬೆರಗಾಗಿ ಅವರನ್ನು ಬೆಂಕಿ ಎಂದು ಕರೆಯಲಾಗುತ್ತಿತ್ತು. ಬೆಂಕಿಯಂತೆ ಪರ್ಫಾಮೆನ್ಸ್‌ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ (Tanisha Kuppanda) ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿದ್ದರು. ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಮಾಡಿ ರಿಲೀಸ್ ಮಾಡಲಾಗಿತ್ತು.

Tanisha Kuppanda 2

‘ಬೆಂಕಿ ಬಂತೋ’ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದರೆ, ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗೆ ಠಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್ ಆಗಿದೆ.

 

‘ಮಂಗಳಗೌರಿ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತ್ರ ‘ಪೆಂಟಗನ್’ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ‘ಉಂಡೆನಾಮ’ ಚಿತ್ರದಲ್ಲೂ ಕಾಣಿಸಿಕೊಂಡರು ತನಿಷಾ ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಇದೀಗ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.

Share This Article