BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

Public TV
2 Min Read
BIGG BOSS 1 1

‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11)  ಆಟ 70ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದರ ನಡುವೆ ವಾಹಿನಿ ಹೊಸ ಪ್ರೋಮೋವೊಂದನ್ನು ಹಂಚಿಕೊಂಡಿದ್ದು, ಬಹಳ ವಿಶೇಷವಾದ ಸಂಗತಿಗಳಿವೆ. ಅದೇನಪ್ಪ ಅಂದ್ರೆ ‘ಬಿಗ್ ಬಾಸ್’ ಮನೆಗೆ ಈ ಹಿಂದಿನ 10ನೇ ಸೀಸನ್‌ನ (BBK 10) ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಜೊತೆಗೆ ಕಳೆದ ವಾರ ಎಲಿಮಿನೇಷನ್ ಗೊಂದಲಕ್ಕೂ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

varthur santhosh

ಕಳೆದ ವಾರಾಂತ್ಯ ಎಲಿಮಿನೇಷನ್‌ ಟ್ವಿಸ್ಟ್‌ ಇತ್ತು. ಆದರೂ ಚೈತ್ರಾ ಕುಂದಾಪುರ (Chaithra Kundapura) ಅವರನ್ನು ಎಲಿಮಿನೇಟ್ ಮಾಡಿರುವ ರೀತಿಯಲ್ಲಿ ಕರೆದುಕೊಂಡು ಬಂದು ಕನ್ಫೆಷನ್ ರೂಮ್‌ನಲ್ಲಿ ಕೂರಿಸಲಾಗಿತ್ತು. ಆದರೆ ಈಗ ರಿಲೀಸ್ ಆಗಿರುವ ಹೊಸ ಪ್ರೋಮೋದಲ್ಲಿ ಅದು ಗೊತ್ತಾಗಿದೆ. ಚೈತ್ರಾ ಅವರನ್ನು ಪುನಃ ಬಿಗ್ ಬಾಸ್‌ಗೆ ಕಳುಹಿಸಲಾಗಿದೆ.

Bigg Boss 15

‘ಬಿಗ್ ಬಾಸ್’ ಕನ್ನಡ ಸೀಸನ್ 10ರ ಸ್ಪರ್ಧಿಗಳು ಈಗ ಮನೆಯೊಳಗೆ ಕಾಲಿಟ್ಟಿದ್ದಾರೆ. ತುಕಾಲಿ ಸಂತು, ವರ್ತೂರು ಸಂತೋಷ್ Varthur Santhosh), ತನಿಷಾ ಕುಪ್ಪಂಡ (Tanisha Kuppanda), ಡ್ರೋನ್ ಪ್ರತಾಪ್ (Drone Prathap) ಮುಂತಾದವರು ಆಗಮಿಸಿದ್ದಾರೆ. ಇನ್ನು, ಚೈತ್ರಾಗೆ ಮಾತಿಗೆ ಮುಂಚೆ ಅಣ್ಣ ಅಣ್ಣ ಎನ್ನುವುದು ರೂಢಿ. ಮನೆಗೆ ಬಂದಿರುವ ಡ್ರೋನ್ ಪ್ರತಾಪ್‌ಗೂ ಕೂಡ ಪ್ರತಾಪಣ್ಣ ಅಂತ ಚೈತ್ರಾ ಕರೆದಿದ್ದಾರೆ. ಅದಕ್ಕೆ ಪ್ರತಾಪ್, ಚೈತ್ರಕ್ಕ, ಅಣ್ಣ ಅಂತೆಲ್ಲಾ ಕರೆಯಬೇಡಿ ಎಂದು ಹೇಳಿದ್ದಾರೆ. ಆಗ ಇಡೀ ಮನೆಯ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ.

ಸಂತೋಷ್ ಅವರನ್ನು ಕಂಡ ಕೂಡಲೇ ಹನುಮಂತು, ಮಾವ ಅಂತ ಬೆನ್ನೇರಿದ್ದಾರೆ. ಆಗ ಅವರು ಮಾವ ಅಂತ್ಹೇಳಿ ನನ್ನ ಮಾನಸನ್ನೇ ಹೊರಗೆ ಕಳಿಸಿದ್ಯಲ್ಲೋ ಎಂದು ಕಾಮಿಡಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಸಂತೋಷ್ ಮತ್ತು ಬೀನ್ ಬ್ಯಾಗ್ ಇಲ್ಲ ಅಂದರೆ ಹೇಗೆ? ಅದು ಸ್ವತಃ ಬಿಗ್ ಬಾಸ್‌ಗೂ ಗೊತ್ತಿದೆ. ಹಾಗಾಗಿ, ವರ್ತೂರು ಸಂತೋಷ್ ಅವರನ್ನು ಕೂಡ ಒಳಗೆ ಕರೆಸಿಕೊಂಡಿದ್ದಾರೆ. ಒಳಗೆ ಬರುವಾಗಲೇ ಎರಡು ಬೀನ್ ಬ್ಯಾಗ್‌ಗಳ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ತುಕಾಲಿ ಸಂತು ಅವರು ವರ್ತೂರು ಸಂತೋಷ್ ಒಳಗೆ ಬರುವುದನ್ನು ಕಂಡೊಡನೆ ಜೋರಾಗಿ ಕೂಗುತ್ತಾ ಅವರನ್ನು ತಬ್ಬಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರೋ ಪ್ರೋಮೋ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Share This Article