ಮೊಳಕೆ ಬರಿಸಿದ ಕಾಳುಗಳು ಅತಿ ಹೆಚ್ಚು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಚಾಟ್‌ಗಳು ಹುರಿದ ತಿಂಡಿಗಳಾಗಿರುತ್ತವೆ. ಆದರೆ ಈ ಮೊಳಕೆ ಬರಿಸಿದ ಕಾಳುಗಳಿಂದ ಮಾಡಲಾಗುವ ಚಾಟ್ ಹೆಚ್ಚು ರುಚಿಕರ ಹಾಗೂ ಆರೋಗ್ಯಕರವಾಗಿದ್ದು, ಮಕ್ಕಳಿಗೆ ಇದನ್ನು ಸುಲಭವಾಗಿ ತಿನ್ನಿಸಬಹುದ. ನಾವಿಲ್ಲಿ ಚಾಟ್‌ಗೆ ಮೊಳಕೆ ಬರಿಸಿದ ಹೆಸರು ಕಾಳನ್ನು ಬಳಸಿದ್ದೇವೆ. ನೀವು ಬೇಕೆಂದರೆ ಯಾವುದೇ ಮೊಳಕೆ ಬರಿಸಿದ ಮಿಶ್ರ ಕಾಳುಗಳನ್ನೂ ಬಳಸಬಹುದು. ಮೊಳಕೆ ಕಾಳಿನ ಚಾಟ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಮೊಳಕೆ ಬರಿಸಿದ ಹೆಸರು ಕಾಳು – 1 ಕಪ್
ಸಣ್ಣಗೆ ಹೆಚ್ಚಿದ ಸೌತೆಕಾಯಿ – ಕಾಲು ಕಪ್
ಸಣ್ಣಗೆ ಹೆಚ್ಚಿದ ಟೊಮೆಟೋ – ಕಾಲು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್
ಹಸಿರು ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಚಾಟ್ ಮಸಾಲಾ – ರುಚಿಗೆ ತಕ್ಕಷ್ಟು
ಹುರಿದ ಜೀರಿಗೆ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – ಅರ್ಧ ಇದನ್ನೂ ಓದಿ: ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಪಕ್ಕಕ್ಕಿಡಿ.
* ಒಂದು ಬೌಲ್‌ನಲ್ಲಿ ಮೊಳಕೆ ಬರಿಸಿದ ಹೆಸರು ಕಾಳನ್ನು ತೆಗೆದುಕೊಂಡು, ಅದಕ್ಕೆ ಸೌತೆಕಾಯಿ, ಹಸಿರು ಮೆಣಸಿನಕಾಯಿ, ಟೊಮೆಟೋ, ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಬಳಿಕ ಅದಕ್ಕೆ ಚಾಟ್ ಮಸಾಲಾ, ಹುರಿದ ಜೀರಿಗೆ ಪುಡಿ, ಉಪ್ಪು, ನಿಂಬೆರಸ ಸೇರಿಸಿ ಮಿಶ್ರಣ ಮಾಡಿ.
* ಇದೀಗ ಆರೋಗ್ಯಕರ ಹಾಗೂ ಪೌಷ್ಟಿಕಾಂಶಭರಿತ ಹೆಸರು ಕಾಳಿನ ಚಾಟ್ ತಯಾರಾಗಿದ್ದು, ಇದನ್ನು ತಕ್ಷಣವೇ ಸವಿಯಿರಿ. ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕುಡಿಯಿರಿ ಮೆಂತ್ಯ ಹಾಲು
Advertisement
Web Stories