ಕರಿ ಎಳ್ಳನ್ನು ಬಳಸಿ ಚೈನೀಸ್ ಸ್ಟೈಲ್ನ ಸಿಹಿ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡಲಿದ್ದೇವೆ. ಡಂಪ್ಲಿಂಗ್ ಎನ್ನಲಾಗುವ ಈ ಸಿಹಿ ಚೀನಾದ ಫೇಮಸ್ ಡಿಶ್. ಇದನ್ನು ಟ್ಯಾಂಗ್ ಯುವಾನ್ ಎಂತಲೂ ಕರೆಯಲಾಗುತ್ತದೆ. ಬಿಸಿ ನೀರು ಅಥವಾ ಶುಂಠಿಯ ಸಿರಪ್ನಲ್ಲಿ ಅದ್ದಿ, ಈ ಡಂಪ್ಲಿಂಗ್ ಅನ್ನು ಬಡಿಸಲಾಗುತ್ತದೆ. ಮಳೆ ಅಥವಾ ತಣ್ಣಗಿನ ದಿನಗಳಲ್ಲಿ ಬೆಚ್ಚಗಿನ ಸಿಹಿ ಸವಿಯಲು ಆಹ್ಲಾದಕರವಾಗಿರುತ್ತದೆ. ಹಾಗಿದ್ರೆ ಟ್ಯಾಂಗ್ ಯುವಾನ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಜಿಗುಟಾದ ಅಕ್ಕಿ ಹಿಟ್ಟು – 250 ಗ್ರಾಂ
ನೀರು – 180 ಮಿ.ಲೀ.
ಕರಿ ಎಳ್ಳು – ಕಾಲು ಕಪ್
ಸಕ್ಕರೆ – ಕಾಲು ಕಪ್
ಬೆಣ್ಣೆ – ಕಾಲು ಕಪ್
ಶುಂಠಿ ಸಿರಪ್ ತಯಾರಿಸಲು:
ನೀರು – 5 ಕಪ್
ಸಕ್ಕರೆ – 1 ಕಪ್
ಸಿಪ್ಪೆ ತೆಗೆದು ಕತ್ತರಿಸಿದ ಶುಂಠಿ – 100 ಗ್ರಾಂ ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕರಿ ಎಳ್ಳನ್ನು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಎಳ್ಳು ಬಿಸಿಯಾದಾಗ ಸಿಡಿಯುತ್ತದೆ. ಇದಕ್ಕಾಗಿ ಬಾಣಲೆಗೆ ಮುಚ್ಚಳ ಬಳಸಿ. ಎಳ್ಳು ಸುಡದಂತೆ ಜಾಗ್ರತೆವಹಿಸಿ.
* ಎಳ್ಳು ಸುವಾಸನೆ ಬರಲು ಪ್ರಾರಂಭವಾಗುತ್ತಿದ್ದಂತೆ ಉರಿಯನ್ನು ಆಫ್ ಮಾಡಿ ತಕ್ಷಣ ಅದನ್ನು ಇನ್ನೊಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
* ಬಳಿಕ ಒಂದು ಬ್ಲೆಂಡರ್ ಬಳಸಿ ಅದರಲ್ಲಿ ಎಳ್ಳನ್ನು ಪುಡಿ ಮಾಡಿಕೊಳ್ಳಿ.
* ನಂತರ ಅದನ್ನು ಬಾಣಲೆಗೆ ವರ್ಗಾಯಿಸಿ, ಸಕ್ಕರೆ ಮತ್ತು ಬೆಣ್ಣೆ ಬೆರೆಸಿ ದಪ್ಪಗಿನ ಪೇಸ್ಟ್ ಆಗುವಂತೆ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ಒಣ ಎನಿಸಿದರೆ ಇನ್ನಷ್ಟು ಬೆಣ್ಣೆ ಸೇರಿಸಬಹುದು.
* ಬಳಿಕ ಈ ಮಿಶ್ರಣವನ್ನು ಫ್ರಿಜ್ನಲ್ಲಿಟ್ಟು ತಣ್ಣಗಾಗಿಸಿ.
* ಈಗ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು ಅದರಲ್ಲಿ ಅಂಟು ಅಕ್ಕಿ ಹಿಟ್ಟನ್ನು ಹಾಕಿ ನಿಧಾನಕ್ಕೆ ನೀರನ್ನು ಬೆರೆಸುತ್ತಾ ಮಿಶ್ರಣ ಮಾಡಿಕೊಳ್ಳಿ. ಇದರಲ್ಲಿ ಸುಮಾರು 15-20 ಉಂಡೆಗಳಾಗುವಂತೆ ವಿಭಜಿಸಿ, ನಿಮ್ಮ ಅಂಗೈ ಸಹಾಯದಿಂದ ಉಂಡೆಯನ್ನು ಚಪ್ಪಟೆಗೊಳಿಸಿ.
* ಈಗ ಎಳ್ಳಿನ ಪೇಸ್ಟ್ ಅನ್ನು ಒಂದೊಂದೇ ಚಮಚದಷ್ಟು ಚಪ್ಪಟೆಗೊಳಿಸಿದ ಹಿಟ್ಟಿನ ಮೇಲೆ ಹಾಕಿ, ಹಿಟ್ಟಿನ ಅಂಚುಗಳನ್ನು ಮಧ್ಯಕ್ಕೆ ತಂದು ಜೋಡಿಸಿ. ಎರಡೂ ಅಂಗೈಗಳನ್ನು ಬಳಸಿ ಮೃದುವಾಗಿ ಚೆಂಡಿನಾಕಾರಕ್ಕೆ ತನ್ನಿ. ಎಲ್ಲ ಹಿಟ್ಟನ್ನು ಇದೇ ರೀತಿ ಮಾಡುವುದನ್ನು ಮುಂದುವರಿಸಿ.
* ಶುಂಠಿ ಸಿರಪ್ ತಯಾರಿಸಲು ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಅದಕ್ಕೆ ಶುಂಠಿ ತುಂಡುಗಳನ್ನು ಹಾಕಿ, ಸುಮಾರು 10-15 ನಿಮಿಷ ಕುದಿಸಿಕೊಳ್ಳಿ.
* ಸಕ್ಕರೆ ಸೇರಿಸಿ ಮತ್ತೆ 5 ನಿಮಿಷ ಕುದಿಸಿ ನಂತರ ಪಕ್ಕಕ್ಕಿಡಿ.
* ಈಗ ಇನ್ನೊಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಡಂಪ್ಲಿಂಗ್ಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಅದು ತೇಲಲು ಪ್ರಾರಂಭಿಸಿದ ತಕ್ಷಣ ನೀರಿನಿಂದ ತೆಗೆದು ಶುಂಠಿಯ ಸಿರಪ್ಗೆ ವರ್ಗಾಯಿಸಿ.
* ಇದೀಗ ಕರಿ ಎಳ್ಳಿನ ಡಂಪ್ಲಿಂಗ್ ಅಥವಾ ಟ್ಯಾಂಗ್ ಯುವಾನ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ
Advertisement
Web Stories