KarnatakaLatestMain PostSports

ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಗುರುತಿಸಲು ಅಂಧ ಮಹಿಳಾ ಫುಟ್‍ಬಾಲ್ ಟ್ರೈನಿಂಗ್

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರುಷ ಅಂಧರ ಫುಟ್‍ಬಾಲ್‌ನಲ್ಲಿ ಗೆಲುವು ಸಾಧಿಸಿದಲು ಕಾರಣವಾಗಿದ್ದ ಸಂಸ್ಥೆ ಇದೀಗ ರಾಷ್ಟ್ರೀಯ ಮಟ್ಟದ ಮಹಿಳಾ ಫುಟ್‍ಬಾಲ್ ಆಟಗಾರರಿಗೆ ತರಬೇತಿಯನ್ನು ಶುರು ಮಾಡಿದೆ.

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫುಟ್‍ಬಾಲ್ ಗ್ರೌಂಡ್‍ನಲ್ಲಿ ತಮೋಘ್ನ ಬ್ಲೈಂಡ್ ಫುಟ್‍ಬಾಲ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯು ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಇದನ್ನೂ ಓದಿ: ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

ಕಳೆದ ವರ್ಷ ಅಂಧ ಪುರುಷರ ಫುಟ್‍ಬಾಲ್ ಚಾಂಪಿಯನ್ ಶಿಪ್ ಕಪ್ ಗೆದ್ದಿದ್ದು, ಈ ಬಾರಿ ಮಹಿಳಾ ಆಟಗಾರ್ತಿಯರಿಗೆ ಈ ಅವಕಾಶ ಸಿಕ್ಕಿದ್ದು ಮಹಿಳಾ ಆಟಗಾರ್ತಿಯರು ಟ್ರೈನಿಂಗ್ ಪಡೆಯುತ್ತಿದ್ದಾರೆ. ತಮೋಘ್ನ ಬ್ಲೈಂಡ್ ಫುಟ್‍ಬಾಲ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆ ಮಾಡುತ್ತಿರುವಂತಹ ಈ ಕೆಲಸಕ್ಕೆ ಯಾವುದೇ ಇತರೆ ಸಂಸ್ಥೆಗಳು ಅಥವಾ ಸರ್ಕಾರ ನೆರವಾಗುತ್ತಿಲ್ಲ ಇದೀಗ ರಾಷ್ಟ್ರೀಯ ಮಟ್ಟದ ಅಂಧರ ಪಂದ್ಯಾವಳಿಗಳನ್ನು ಆಯೋಜಿಸಲು ನಿರ್ಧರಿಸಿದೆ. ಯಾವುದೇ ಸಹಾಯ ಹಸ್ತ ಇಲ್ಲದೆ ನಮ್ಮ ಖರ್ಚುವೆಚ್ಚಗಳನ್ನು ಈ ಸಂಸ್ಥೆಯೇ ಬರಿಸುತ್ತಿದ್ದು ಈ ಬಾರಿಯೂ ಸಹ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಅನ್ನು ನಾವು ಪಡೆಯುತ್ತೇವೆ ಎಂದು ಕ್ರೀಡಾಪಟುಗಳು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ʻಖುಷಿʼ ಶೂಟಿಂಗ್ ವೇಳೆ ನೀರಿಗೆ ಬಿದ್ದ ವಾಹನ: ಸಮಂತಾ- ವಿಜಯ್ ದೇವರಕೊಂಡ ಸೇಫ್!

Leave a Reply

Your email address will not be published.

Back to top button