ಚೆನ್ನೈ: ಸ್ಮಶಾನದಲ್ಲಿ ಹೂತಿಟ್ಟಿದ್ದ 16 ಕೆಜಿ ಚಿನ್ನವನ್ನು ತಮಿಳಿನಾಡಿನ ವೆಲ್ಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೆಲ್ಲೂರು ನಗರದ ಜ್ಯುವೆಲ್ಲರಿ ಶೋರೂಂನಿಂದ ಕಳವಾಗಿದ್ದ 16 ಕೆಜಿ ಚಿನ್ನವನ್ನು ಸೋಮವಾರ ಸ್ಮಶಾನದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ನ 8 ಪ್ರಮುಖ ನಗರದಲ್ಲಿ ಡಿಸೆಂಬರ್ 31 ರವೆಗೆ ನೈಟ್ ಕರ್ಫ್ಯೂ
Advertisement
Advertisement
ಡಿಸೆಂಬರ್ 15 ರಂದು ಮುಸುಕುಧಾರಿಯೊಬ್ಬ ಅಂಗಡಿಗೆ ನುಗ್ಗಿ 16 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಈ ಪ್ರಕರಣವನ್ನು ಬೇಧಿಸಲು ನಿಯೋಜನೆಗೊಂಡಿದ್ದ ವಿಶೇಷ ತಂಡ ಸಿಸಿಟಿವಿಯ ಆರೋಪಿಯನ್ನು ಅನೈಕಟ್‌ನಲ್ಲಿ ಬಂಧಿಸಲಾಗಿತ್ತು. ಇದನ್ನೂ ಓದಿ: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಎಸ್‍ಟಿಎಸ್ ಸೂಚನೆ
Advertisement
ವಿಚಾರಣೆಯ ವೇಳೆ ಆತ ನಗರದಿಂದ 40 ಕಿ.ಮೀ ದೂರದಲ್ಲಿರುವ ಓದುಕತ್ತೂರಿನ ಸ್ಮಶಾನದಲ್ಲಿ ಚಿನ್ನವನ್ನು ಹೂತಿಟ್ಟಿರುವುದಾಗಿ ತಿಳಿಸಿದ್ದ. ಈ ಮಾಹಿತಿ ಆಧಾರದ ಪೊಲೀಸರು ಜಾಗಕ್ಕೆ ತೆರಳಿ ಚಿನ್ನವನ್ನು ಮೇಲಕ್ಕೆ ಎತ್ತಿದ್ದಾರೆ. ಬಂಧಿತ ವ್ಯಕ್ತಿ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.