ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

Public TV
2 Min Read
D Gukesh

ಚೆನ್ನೈ: ವಿಶ್ವ ಚೆಸ್ ಚಾಂಪಿಯನ್ (World Chess Champion) ಡಿ.ಗುಕೇಶ್‌ಗೆ ಇಂದು (ಡಿ.17) ತಮಿಳುನಾಡು ಸರ್ಕಾರ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು, 5 ಕೋಟಿ ರೂ. ಬಹುಮಾನ ವಿತರಣೆ ಮಾಡಲಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರು ಇಂದು 5 ಕೋಟಿ ರೂ. ಬಹುಮಾನ ಚೆಕ್ ಹಸ್ತಾಂತರಿಸಲಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ (Viswanathan Anand) ಸಹ ಭಾಗವಹಿಸಲಿದ್ದಾರೆ.ಇದನ್ನೂ ಓದಿ: ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತೇನೆ ಅಂದರೆ ಇರಲಿ: ಮಾಜಿ ಪತಿ ಸಂಜಯ್ ಸಿಂಗ್

ಈ ಕುರಿತು ಸಿಎಂ ಎಂ.ಕೆ. ಸ್ಟಾಲಿನ್ ಡಿ.ಗುಕೇಶ್ ಐತಿಹಾಸಿಕ ಸಾಧನೆ ಗುರುತಿಸಿ 5 ಕೋಟಿ ನಗದು ಬಹುಮಾನವನ್ನು ನೀಡುವುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಸೋಮವಾರ (ಡಿ.16) ತವರಿಗೆ ಬಂದಿಳಿದದ ಗುಕೇಶ್ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರ ಅಭಿಮಾನಿಗಳು ಸೇರಿದಂತೆ ಇನ್ನಿತರರು ಅದ್ದೂರಿಯಾಗಿ ಸ್ವಾಗತಿಸಿದರು.

18ರ ಹರೆಯದ ಹುಡುಗ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು. ಕಳೆದ ವಾರ ನಡೆದ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ವಿಶ್ವ್ ಚಾಂಪಿಯನ್‌ಶಿಪ್‌ನ ಕೊನೆಯ 14ನೇ ನಿರ್ಣಾಯಕ ಪಂದ್ಯದಲ್ಲಿ 6.5-6.5 ಸಮಬಲಗೊಂಡು, ಬಳಿಕ 7.5-6.5 ಅಂಕಗಳೊಂದಿಗೆ ಗುಕೇಶ್ ಗೆಲುವು ಸಾಧಿಸುವ ಮೂಲಕ ಅಮೋಘ ಪ್ರದರ್ಶನ ನೀಡಿದ್ದರು. ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಎರಡನೇ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಗುಕೇಶ್ ಅವರು ಮುಂದಿನ ವರ್ಷ ನಾರ್ವೆ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವದ ಅತಿ ಹೆಚ್ಚು ಶ್ರೇಯಾಂಕದ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಎದುರಿಸಲಿದ್ದಾರೆ.ಇದನ್ನೂ ಓದಿ: ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕೋದಲ್ಲ, ಇದ್ರಲ್ಲಿ ಬಿಎಸ್‌ವೈ ಕುತಂತ್ರ ಇದ್ದೇ ಇರುತ್ತೆ – ಯತ್ನಾಳ್ ಕಿಡಿ

Share This Article