– ಡಿಎಂಕೆ ಸರ್ಕಾರವನ್ನ ಬೇರುಸಹಿತ ಕಿತ್ತೊಗೆಯಬೇಕೆಂದು ಪ್ರತಿಜ್ಞೆ
ಚೆನ್ನೈ: ತಮಿಳುನಾಡಿನಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎಂದು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ (Tamilisai Soundararajan) ಆತಂಕ ವ್ಯಕ್ತಪಡಿಸಿದ್ದಾರೆ.
#WATCH | International Women’s Day | BJP leader Tamilisai Soundararajan says, “I thank the Prime Minister for selecting Vaishali (Chess grandmaster) to handle his social media… Since girlchild studying in Tamil Nadu are not safe, the real women’s day celebration will be to root… pic.twitter.com/AiGthMsUch
— ANI (@ANI) March 8, 2025
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (Womens Day) ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ಹಾಗಾಗಿ ನಿಜವಾದ ಮಹಿಳಾ ದಿನಾಚರಣೆಯು ಡಿಎಂಕೆ ಸರ್ಕಾರವನ್ನು ಬೇರುಸಹಿತ ಕಿತ್ತೊಗೆದು 2026 ರಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಜಾರಿಗೆ ತಂದಾಗ ಸಾರ್ಥಕವಾಗುತ್ತದೆ. ಡಿಎಂಕೆ ಸರ್ಕಾರವನ್ನ ಬೇರುಸಹಿತ ಕಿತ್ತೊಗೆಯುವುದು ಇಂದಿನ ನಮ್ಮ ಪ್ರತಿಜ್ಞೆ ಎಂದು ಅಬ್ಬರಿಸಿದ್ದಾರೆ.
Vanakkam!
I am @chessvaishali and I am thrilled to be taking over our PM Thiru @narendramodi Ji’s social media properties and that too on #WomensDay. As many of you would know, I play chess and I feel very proud to be representing our beloved country in many tournaments. pic.twitter.com/LlYTmqE2MQ
— Narendra Modi (@narendramodi) March 8, 2025
ಮುಂದುವರಿದು.. ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ ಕುರಿತು ಮಾತನಾಡಿ, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಜನರು ಈಗ ತ್ರಿಭಾಷಾ ನೀತಿಯನ್ನು ಬಯಸುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಮಿಳಿಸೈ ಹೇಳಿದ್ದಾರೆ.
ಇದೇ ವೇಳೆ, ಚೆಸ್ ಗ್ರ್ಯಾಂಡ್‌ಮಾಸ್ಟರ್ ವೈಶಾಲಿ (Vaishali) ಅವರನ್ನು ತಮ್ಮ ಸಾಮಾಜಿಕ ಮಾಧ್ಯಮ ನಿರ್ವಹಣೆಗೆ ಆಯ್ಕೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.