ಭಾರತೀಯ ವೀರ ಯೋಧರು ಉಗ್ರರ 9 ಅಡುಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಈ ಹಿನ್ನೆಲೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಭಾರತದ ಸೇನೆ ಮತ್ತು ಪಿಎಂ ನರೇಂದ್ರ ಮೋದಿ (Narendra Modi) ಅವರನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ:ಸಾಮ ಬೇಧ ದಂಡ, ಮೋದಿ ಭಾರತದ ಪ್ರಚಂಡ: ಜಗ್ಗೇಶ್
ಯೋಧರ ಹೋರಾಟ ಶುರುವಾಗಿದೆ. ಮಿಷನ್ ಮುಗಿಯೋವರೆಗೂ ನಿಲ್ಲೋದಿಲ್ಲ. ಪ್ರಧಾನಿ ಮೋದಿ ಅವರೇ, ಹೋಮ್ ಮಿನಿಸ್ಟರ್ ಅಮಿತ್ ಶಾ ಅವರೇ ಇಡೀ ದೇಶ ನಿಮ್ಮ ಜೊತೆಗೆ ಇರುತ್ತದೆ. ಆಪರೇಷನ್ ಸಿಂಧೂರ, ಜೈ ಹಿಂದ್ ಎಂದು ಎಕ್ಸ್‌ನಲ್ಲಿ ರಜನಿಕಾಂತ್ ಬರೆದುಕೊಂಡಿದ್ದಾರೆ. ಈ ಮೂಲಕ ಹೋರಾಟ ಶುರುವಾಗಿದೆ ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ತಲೈವಾ. ಇದನ್ನೂ ಓದಿ: ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ ಇದು ಪವಿತ್ರ ಪ್ರತಿಜ್ಞೆ: ಸುದೀಪ್
The fighter’s fight begins…
No stopping until the mission is accomplished!
The entire NATION is with you. @PMOIndia @HMOIndia#OperationSindoor
JAI HIND 🇮🇳
— Rajinikanth (@rajinikanth) May 7, 2025
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.