ತಮಿಳಿನ ಸ್ಟಾರ್ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ (Indian 2) ಸಿನಿಮಾದ ಆಡಿಯೋ ಲಾಂಚ್ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕನಸಿನ ಭಾರತದ ಬಗ್ಗೆ ಕಮಲ್ ಹಾಸನ್ (Kamal Haasan) ಹಂಚಿಕೊಂಡಿದ್ದಾರೆ. ಒಬ್ಬರ ತಮಿಳಿಗ ಭಾರತವನ್ನು ಆಳಬೇಕು ಎಂದಿದ್ದಾರೆ. ಇದನ್ನೂ ಓದಿ:ಕಿಚ್ಚನ ಜೊತೆ ನಟಿಸಬೇಕಂತೆ ಮಹಾನಟಿ: ಅವಕಾಶ ಕೊಡ್ತಾರಾ ಸುದೀಪ್?
ನಾನು ಒಬ್ಬ ತಮಿಳಿಗ. ನಾನು ಭಾರತೀಯನೂ ಹೌದು. ನಾನು ಒಮ್ಮೆಲೆ ತಮಿಳಿಗ ಹಾಗೂ ಭಾರತೀಯ ಎರಡೂ ಆಗಿರಬಲ್ಲೆ. ಒಡೆದು ಆಳುವುದು ಬ್ರಿಟೀಷರ ಪದ್ಧತಿ ಆಗಿತ್ತು. ಅವರು ಹಾಗೆ ಮಾಡಿದರು ಏಕೆಂದರೆ ಭಾರತೀಯರು ಒಗ್ಗಟ್ಟಾದಾಗ ಓಡಿಹೋಗಲು ಅವರಿಗೆ ಒಂದು ಮನೆ ಎಂಬುದಿತ್ತು. ಆದರೆ ಇಂದು ಒಡೆದು ಆಳುತ್ತಿರುವವರು ಎಲ್ಲಿಗೆ ಓಡಿಹೋಗುತ್ತಾರೆ ಎಂದು ನಟ ಪ್ರಶ್ನೆ ಮಾಡಿದ್ದಾರೆ. ಭಾರತವನ್ನು ಒಡೆದು ಆಳುತ್ತಿರುವವರ ವಿರುದ್ಧ ಭಾರತೀಯರು ಒಂದಲ್ಲ ಒಂದು ದಿನ ದಂಗೆ ಏಳುತ್ತಾರೆ ಎಂದು ಮಾತನಾಡಿದರು.
#KamalHaasanwallpaper???????? #KamalHaasan???? #indian2 pic.twitter.com/pMmNsTZACs
— Syed Hasan (@Syedibrahim026) June 2, 2024
ನನಗೆ ಒಂದು ಕನಸಿದೆ, ಒಂದು ದಿನ ಒಬ್ಬ ತಮಿಳಿಗ ಭಾರತವನ್ನು ಆಳಬೇಕು, ಅದೂ ಭಾರತದ ವಿವಿಧತೆಯನ್ನು ಸಂರಕ್ಷಿಸಿ ಭಾರತವನ್ನು ಆಳಬೇಕು ಎಂದರು. ಮುಂದುವರೆದು, ಈ ದೇಶದ ಒಗ್ಗಟ್ಟನ್ನು ನಾವೇ ಕಾಪಾಡಬೇಕು ಎಂದಿದ್ದಾರೆ. ಇನ್ನೂ ಕಮಲ್ ಹಾಸನ್ ನಟ ಮಾತ್ರವಲ್ಲ. ರಾಜಕಾರಣಿಯೂ ಹೌದು, ಮಕ್ಕಳ್ ನಿಧಿ ಮಯಂ ಹೆಸರಿನ ಪಕ್ಷ ಕಟ್ಟಿ ನಡೆಸುತ್ತಿದ್ದಾರೆ.
1996ರಲ್ಲಿ ಇಂಡಿಯನ್ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸೇನಾಪತಿ ಎಂಬ ಪಾತ್ರದಲ್ಲಿ ಕಮಲ್ ಹಾಸನ್ ಅವರು ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ‘ಇಂಡಿಯನ್ 2’ ಸಿನಿಮಾ ಮೂಡಿಬರುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕಮಲ್ ಹಾಸನ್ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಮತ್ತದೇ ಅವತಾರದಲ್ಲಿ ನೋಡಬಹುದಾಗಿದೆ. ಇದೇ ಜುಲೈ 12ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಕಮಲ್ ಹಾಸನ್ ಜೊತೆ ಸಿದ್ದಾರ್ಥ್, ಎಸ್ ಜೆ ಸೂರ್ಯ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಂ, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಕಣಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲಾ ಕಿಶೋರ್, ಮತ್ತು ದೀಪಾ ಶಂಕರ್ ತಾರಾಬಳಗದಲ್ಲಿದ್ದಾರೆ.