ಚಂಡಿಗಢ: ಪಂಜಾಬಿನ (Punjab) ಭಟಿಂಡಾದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ (Inter-University) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ (Tamil Nadu) ಕಬಡ್ಡಿ ಆಟಗಾರ್ತಿಯರ (Kabaddi Players) ಮೇಲೆ ಹಲ್ಲೆ ನಡೆದಿದೆ.
ಪಂದ್ಯದ ರೆಫ್ರೆ ನಿರ್ಧಾರದಿಂದ ಈ ಜಗಳ ಆರಭವಾಯಿತು ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಪರಸ್ಪರ ಬಡಿದಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
Advertisement
ತಮಿಳುನಾಡು ಮತ್ತು ದರ್ಭಾಂಗ ವಿಶ್ವವಿದ್ಯಾಲಯದ ಮಧ್ಯೆ ಕಬಡ್ಡಿ ಪಂದ್ಯ ನಡೆಯುತ್ತಿತ್ತು. ಈ ವೇಳೆ ರೆಫ್ರಿ ತೀರ್ಪು ನೀಡಿದ ತೀರ್ಪನ್ನು ತಮಿಳುನಾಡು ಆಟಗಾರ್ತಿಯರು ಪ್ರಶ್ನಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆದಿದೆ. ಇದನ್ನೂ ಓದಿ: ಕನ್ನಡದ ವಿಷ್ಣು ವಿಜಯದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಈಗ ಸನ್ಯಾಸಿನಿ
Advertisement
Advertisement
It is shocking that Tamil Nadu women players who went to play Kabaddi in Punjab were attacked. The attack took place during a Kabadi match between Punjab and Tamil Nadu. I urge the Punjab Chief Minister Bhagwant Mann ji to take appropriate enquiry and action on attackers.… pic.twitter.com/vIZrG0EsVn
— Devakumaar (@DevakumaarOffcl) January 24, 2025
Advertisement
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಆಟಗಾರ್ತಿಯರು ಕೆಲವು ಪುರುಷರೊಂದಿಗೆ ಘರ್ಷಣೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ಅಧಿಕಾರಿಗಳೋ ಅಥವಾ ಪ್ರೇಕ್ಷಕರೋ ಎಂಬುದು ವೀಡಿಯೋದಿಂದ ಸ್ಪಷ್ಟವಾಗಿಲ್ಲ. ಎರಡೂ ಕಡೆಯವರು ಪ್ಲಾಸ್ಟಿಕ್ ಚಯರ್‌ಗಳನ್ನು ಎಸೆಯುವುದನ್ನು ನೋಡಬಹುದು. ಇದನ್ನೂ ಓದಿ: ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್ ಶಾಸಕ?
ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ನಮ್ಮ ರಾಜ್ಯದ ಆಟಗಾರ್ತಿಯರು ಸುರಕ್ಷಿತವಾಗಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಆಟಗಾರ್ತಿಯರಿಗೆ ಯಾವುದೇ ದೊಡ್ಡ ಗಾಯಗಳು ಅಥವಾ ಏನೂ ಆಗಿಲ್ಲ. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರು ದೆಹಲಿಗೆ ಹಿಂತಿರುಗಲಿದ್ದಾರೆ. ಶೀಘ್ರದಲ್ಲೇ ಅವರು ಚೆನ್ನೈಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
\