ಚೆನ್ನೈ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯೇ ಪತಿಯ ಗುಪ್ತಾಂಗಕ್ಕೆ ಕುದಿಯುವ ಬಿಸಿ ನೀರು ಎರಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದೀಗ ಸುಟ್ಟ ಗಾಯದಿಂದ ಬಳಲುತ್ತಿರುವ 32 ವರ್ಷದ ವ್ಯಕ್ತಿಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಗೊಂಡಿರುವ ವ್ಯಕ್ತಿಯನ್ನು ಪುದುಪಟ್ಟು ಮೂಲದ ತಂಗರಾಜ್ ಎಂದು ಗುರುತಿಸಲಾಗಿದ್ದು, ಏಳು ವರ್ಷಗಳ ಹಿಂದೆ 29 ವರ್ಷದ ಪ್ರಿಯಾಳನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್
ತಂಗರಾಜ್ ಮೊಬೈಲ್ ತಯಾರಿಸುವ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ತಂಗರಾಜ್ ತನ್ನ ಕೆಲಸದ ಸ್ಥಳದಲ್ಲಿ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಪ್ರಿಯಾ ಅನೇಕ ಬಾರಿ ಪತಿಯೊಂದಿಗೆ ಜಗಳವಾಡಿದ್ದಳು ಎಂದು ತಿಳಿದುಬಂದಿದೆ.
ಮಂಗಳವಾರ ದಂಪತಿ ನಡುವೆ ಮತ್ತೆ ಜಗಳ ಆಗಿದ್ದು, ನಂತರ ತಂಗರಾಜ್ ಮಲಗಿದ್ದರು. ಆದರೆ ಇನ್ನೂ ಅಸಮಾಧಾನಗೊಂಡ ಪ್ರಿಯಾ, ಕುದಿಯುವ ನೀರನ್ನು ಕಾಯಿಸಿ ತಂಗರಾಜ್ ಅವರ ಗುಪ್ತಾಂಗದ ಮೇಲೆ ಸುರಿದಿದ್ದಾಳೆ. ಇದನ್ನೂ ಓದಿ: ದೇಶದ ಮೊದಲ ಎಲೆಕ್ಟ್ರಿಕ್ ಡಬ್ಬಲ್ ಡೆಕ್ಕರ್ ಬಸ್ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?
ಈ ವೇಳೆ ತಂಗರಾಜ್ ನೋವಿನಿಂದ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಆತನನ್ನು ರಕ್ಷಿಸಿ ವಾಲಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ವ್ಯಕ್ತಿಯ ಗುಪ್ತಾಂಗಕ್ಕೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಕಾವೇರಿಪಾಕ್ಕಂ ಪೊಲೀಸರು ಇದೀಗ ಪ್ರಿಯಾ ವಿರುದ್ಧ 294, 324, 506 ಮತ್ತು 506 (ii) ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.